ದೆಹಲಿ: ಮಾಸ್ಕ್ ಧರಿಸದೆ ಸಂಚರಿಸುವವರನ್ನು ಕೋವಿಡ್-19 ಕೇರ್ ಸೆಂಟರ್‌ಗಳಲ್ಲಿ ಕಡ್ಡಾಯ ಸೇವೆಗೆ ನಿಯೋಜಿಸಬೇಕು ಎಂಬ ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ ಬುಧವಾರ ನೀಡಿದ್ದ ತೀರ್ಪಿನ ಬಗ್ಗೆ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠವು, ಗುಜರಾತ್ ಹೈಕೋರ್ಟ್ನ ಈ ನಿರ್ದೇಶನವನ್ನು ನ್ಯಾಯಸಮ್ಮತವಾಗಿ ನಿರ್ವಹಿಸುವುದು ಕಷ್ಟ ಮತ್ತು ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.
PublicNext
03/12/2020 11:29 pm