ಕೋಲ್ಕತಾ : ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ದ ಕಾಳಿ ಪೂಜೆಯ ವೇಳೆ ಪಟಾಕಿ ಸುಡಲು ಅನುಮತಿ ನೀಡಿಲ್ಲ.
ಪಟಾಕಿ ನಿಷೇಧ ಕಾನೂನನ್ನು ಉಲ್ಲಂಘಿಸಿ ಪಟಾಕಿ ಹಚ್ಚುವವರನ್ನು ಪತ್ತೆಹಚ್ಚಲು ಪಶ್ಚಿಮ ಬಂಗಾಳ ಸರ್ಕಾರ ಪೊಲೀಸರಿಗೆ ಜಿಪಿಎಸ್ ಆಧಾರಿತ ಸೌಂಡ್ ಮಾನಿಟರಿಂಗ್ ಸಾಧನವನ್ನು ನೀಡಿದೆ.
ಇದಾಗಲೇ ಸಾವಿರಕ್ಕೂ ಅಧಿಕ ಸೌಂಡ್ ಮಾನಿಟರಿಂಗ್ ಸಾಧನಗಳನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವಿತರಿಸಲಾಗಿದೆ.
ಕಾಳಿ ಪೂಜೆ ಮತ್ತು ಇತರ ಹಬ್ಬಗಳ ಆಚರಣೆ ವೇಳೆ ಪಟಾಕಿ ಮಾರಾಟ ಮತ್ತು ಪಟಾಕಿ ಸುಡುವುದನ್ನು ಸರ್ಕಾರ ನಿಷೇಧಿಸಿದೆ.
ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಪಟಾಕಿ ಹಚ್ಚಲು ಅನುಮತಿ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರೂ ಅದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.
ಉತ್ಸವಗಳನ್ನು ನಡೆಸುವುದು ಎಲ್ಲರಿಗೂ ಮುಖ್ಯ. ಆದರೆ ಅದಕ್ಕಿಂತ ಮುಖ್ಯವಾದದ್ದು ಮನುಷ್ಯನ ಜೀವ.
ಮನುಷ್ಯನ ಪ್ರಾಣ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೋಲ್ಕೊತಾ ಕೋರ್ಟ್ ತೀರ್ಪು ನೀಡಿದೆ.
PublicNext
11/11/2020 06:23 pm