ಆಂಬ್ಯುಲೆನ್ಸ್‌ಗೆ ಎಲ್ಲರೂ ದಾರಿ ಬಿಡಬೇಕು ಅನ್ನೋದು ನಿಯಮ. ಆದರೆ ಟ್ರಾಫಿಕ್ ಸಮಸ್ಯೆಯಿಂದ ಇಕ್ಕಟ್ಟಿಗೆ ಸಿಲುಕ್ಕಿದ್ದ ಆಂಬ್ಯುಲೆನ್ಸ್‌ಗೆ ದಾರಿ ಕಲ್ಪಿಸಿ ಓರ್ವ ಪೊಲೀಸ್ ರಿಯಲ್ ಹೀರೋ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸ್ ಕರ್ತವ್ಯ ಪ್ರಜ್ಞೆ ಹಾಗೂ ಹೃದಯ ಶ್ರೀಮಂತಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆ ಹೈದರಾಬಾದ್‌ನ ಜಿಪಿಓ ಜಂಕ್ಷನ್ ಮತ್ತು ಕೋಟಿ ಆಂಧ್ರ ಬ್ಯಾಂಕ್ ನಡುವಣ ರಸ್ತೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್‌ಗೆ ದಾರಿ ತೋರಿದ ಟ್ರಾಫಿಕ್ ಕಾನ್ ಸ್ಟೇಬಲ್ ಜಿ ಬಾಬ್ಜಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಿ ಬಾಬ್ಜಿ ಅವರು ಬರೋಬ್ಬರಿ ಎರಡು ಕಿಲೋಮೀಟರ್ ಓಡಿ ಟ್ರಾಫಿಕ್ ಜಾಮ್ ತೆರವುಗೊಳಿಸಿ ಆಂಬುಲೆನ್ಸ್‌ಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.
ಸೋಮವಾರವೇ ಘಟನೆ ನಡೆದಿದ್ದರೂ ಈ ವಿಡಿಯೋವನ್ನು ಹೈದರಾಬಾದ್ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಬಳಿಕ ಬೆಳಕಿಗೆ ಬಂದಿದೆ. ಆಂಬ್ಯುಲೆನ್ಸ್‌ನಲ್ಲಿ ಇರುವವರು ಈ ದೃಶ್ಯವನ್ನು ಸೆರೆ ಹಿಡಿದಿದ್ದರು.
PublicNext
06/11/2020 07:46 pm