ಮುಂಬೈ: ಇಂಟಿರಿಯರ್ ಡಿಸೈನರ್ ಹಾಗೂ ಅವರ ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಅರ್ನಬ್ ಗೋಸ್ವಾಮಿ ಅವರನ್ನು 14 ದಿನಗಳ ಕಾಲ (ನವೆಂಬರ್ 18ರವರೆಗೆ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಅರ್ನಬ್ ಅವರು ಜಾಮೀನು ನೀಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, "ದೂರುದಾರರ ಹೇಳಿಕೆ ಹಾಗೂ ಪ್ರಕರಣವನ್ನು ಆಲಿಸದೆ ಮಧ್ಯಂತರ ಜಾಮೀನು ನೀಡಲು ಸಾಧ್ಯವಿಲ್ಲ'' ಎಂದು ಹೈಕೋರ್ಟ್ ಹೇಳಿದೆ.
PublicNext
05/11/2020 07:51 pm