ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಹಾ ಮಾಡಿದ ರೈತರು: ಪಾತ್ರೆ ಕಸಿದುಕೊಂಡ ಪೊಲೀಸರು

ಬೆಳಗಾವಿ- ರೈತರ ಪ್ರತಿಭಟನೆ ಕಾವು ಕುಂದಾನಗರಿ ಬೆಳಗವಿಯಲ್ಲೂ ಜೋರಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನಾ ನಿರತ ರೈತ ಸಂಘಟನೆಗಳ ನಾಯಕರು ಬೀದಿಯಲ್ಲೇ ಚಹಾ ತಯಾರಿಸಿದ್ದಾರೆ. ಶುಗರ್ ಲೆಸ್ ಚಹಾ ಮಾಡಿ ಇದನ್ನ ಪ್ರಧಾನಿ ನರೇಂದ್ರ ಮೋದಿಗೆ ಕೊಡ್ತೀವಿ ಎಂದು ವಿಭಿನ್ನ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಚಹಾ ಪಾತ್ರೆ ಕಸಿದುಕೊಂಡಿದ್ದಾರೆ‌. ಇದಕ್ಕೆ ಅಸಮಾಧಾನಗೊಂಡ ಪ್ರತಿಭಟನಾಕಾರರು ಪೊಲೀಸರೊಂದಿಗೆ ಕೆಲಹೊತ್ತು ವಾಗ್ವಾದ ನಡೆಸಿದರು. ನಗರದ ಚೆನ್ನಮ್ಮ ವೃತ್ತ ಹಾಗೂ ಇತರ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗಾವಿಯಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ.

Edited By : Nagaraj Tulugeri
PublicNext

PublicNext

08/12/2020 09:00 am

Cinque Terre

82.33 K

Cinque Terre

13

ಸಂಬಂಧಿತ ಸುದ್ದಿ