ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಇಡೀ ದೇಶದ ಅನ್ನದಾತರು ಸಿಡಿದೆದ್ದಿದ್ದಾರೆ. ಕೃಷಿ ಕಾಯ್ದೆ ಹಾಗೂ ಇನ್ನಿತೆ ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಭಾರತ್ ಬಂದ್ಗೆ ಕೆರೆ ನೀಡಲಾಗಿದೆ. ಬಿಜೆಪಿಯೇತರ ಎಲ್ಲ ಪಕ್ಷಗಳು, ಎಡ ಪಕ್ಷಗಳು ಹಾಗೂ ದೇಶದ ಬಹುತೇಕ ರೈತ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ರೈತರ ಪ್ರಮುಖ ಹಾಗೂ ನೈಜ ಬೇಡಿಕೆಗಳು ಈ ಕೆಳಗಿನಂತಿವೆ.
* ಕೇಂದ್ರ ಜಾರಿಗೆ ತಂದ ಕಾಯ್ದೆಗಳ ತಿದ್ದುಪಡಿಗೂ ಒಪ್ಪಲ್ಲ
* ಕೃಷಿ ಬೆಳೆಗಳಿಗೆ ನ್ಯಾಯಯುತವಾಗಿ ಬೆಂಬಲ ಬೆಲೆ ನಿಗದಿ ಆಗಬೇಕು
* ಹೊಸ ಕೃಷಿ ಕಾಯ್ದೆಗಳು ಜಾರಿ ಆಗಬೇಕು
* ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು
* ರೈತರೇ ರೂಪಿಸಿದ ಕೃಷಿ ಕಾಯ್ದೆಯನ್ನು ಸಂಸತ್‍ನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.
* ನೂತನ ಕೃಷಿ ಕಾಯ್ದೆ ರಚಿಸಲು ರೈತ ಆಯೋಗ ರಚಿಸಬೇಕು
* ರೈತ ಆಯೋಗದಲ್ಲಿ ರೈತರಷ್ಟೇ ಇರಬೇಕು. ಉನ್ನತಾಧಿಕಾರಿಗಳು, ತಜ್ಞರು ಇರಬಾರದು.
PublicNext
08/12/2020 08:32 am