ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಕೃಷ್ಣಾ ನದಿಯಲ್ಲಿ ನೀರು ಪಾಲಾದ ಯುವಕ

ಅಥಣಿ: ಶ್ರಾವಣ ಮಾಸದ ಪೂಜೆಗಾಗಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ನೀರು ಒಯ್ಯಲು ಆಗಮಿಸಿದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾದ ದುರ್ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬ ಯುವಕ ದೇವರ ಪೂಜೆಗೆ ಕೃಷ್ಣಾನದಿಯಿಂದ ಸ್ನಾನ ಮಾಡಿ ನೀರು ತರಲು ಆಗಮಿಸಿದ ವೇಳೆ ದುರ್ಘಟನೆ ಜರುಗಿದೆ.

ಅಥಣಿ ತಾಲೂಕಿನ ಹಲ್ಯಾಳ ದರೂರ ಬ್ರಿಡ್ಜನಲ್ಲಿ ಈ ದುರ್ಘಟನೆ ಜರುಗಿದ್ದು, ಈಜು ಬರುತ್ತಿದ್ದ ವ್ಯಕ್ತಿ ಅಚಾನಕ್ ಆಗಿ ನೀರನಲ್ಲಿ ಹರಿದು ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಹೊಳೆ ಸ್ನಾನಕ್ಕೆಂದು ನಾವು ಐದು ಜನ ಸ್ನೇಹಿತರು ಬಂದು ಸ್ನಾನ ಮಾಡಿ ನದಿ ದಡದಲ್ಲಿ ಪೂಜೆ ಮಾಡುತ್ತಿದ್ದಾಗ ಹಿಂದುರುಗಿ‌ ನೋಡಿದಾಗ ಆತ ಕಣ್ಮರೆಯಾಗಿದ್ದ ಭಯದಿಂದ ನಾವು ಎಷ್ಟು ಹುಡುಕಾಡಿದರೂ ಸಿಗಲಿಲ್ಲ

ಘಟನೆಯ ವಿಷಯ ತಿಳಿದ ತಕ್ಷಣ ನಾವು 6 ಜನ ಸಿಬ್ಬಂದಿಗಳು ಬಂದು ಗ್ರಾಫನೇಲ್ ಹಾಕಿ ಪರಿಶೀಲಿಸಿದಾಗ ವ್ಯಕ್ತಿ ಸಿಕ್ಕಿಲ್ಲ. ಈಗ ಬೋಟ್ ತರಿಸಿಕೊಂಡು ಮುಂದಿನ ಕಾರ್ಯಾಚರಣೆ ನಡೆಸ್ತಿವಿ.

Edited By :
PublicNext

PublicNext

26/08/2022 12:01 pm

Cinque Terre

99.39 K

Cinque Terre

0

ಸಂಬಂಧಿತ ಸುದ್ದಿ