ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಬೈಕ್ ಮತ್ತು ಕಾರ್ ನಡುವೆ ಅಪಘಾತ ಇಬ್ಬರ ಸ್ಥಿತಿ ಚಿಂತಾಜನಕ!

ಪಾವಗಡ: ಪಾವಗಡ ಪಟ್ಟಣದ ಟೋಲ್ ಗೇಟ್ ಬಳಿ ಇರುವ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ಸಂಜೆ ಬಳ್ಳಾರಿ ರಸ್ತೆಯಿಂದ ಬರುತ್ತಿದ್ದ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ ಬೈಕ್ ನಜ್ಜು ಗುಜ್ಜಾಗಿದೆ. ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ಹರೀಶ್ ಮತ್ತು ಭಾಷಾ ಎನ್ನುವರು ಈ ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಸದ್ಯ ಬೈಕ್ ಸವಾರರ ಪರಿಸ್ಥಿತಿ ಗಂಭೀರವಾಗಿದ್ದು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮ ಕೂರು ಮತ್ತು ಹಿಂದೂಪುರಕ್ಕೆ ದಾಖಲಿಸಲಾಗಿದೆ.

ಅಪಘಾತವಾದ ಸಮಯದಲ್ಲಿ ಸ್ಥಳೀಯ ಆಟೋ ಚಾಲಕರು ಹಾಗೂ ಆರ್ ಕೆ ಆಂಬುಲೆನ್ಸ್ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪಾವಗಡ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪಾವಗಡ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

Edited By :
PublicNext

PublicNext

21/08/2022 08:47 pm

Cinque Terre

65.11 K

Cinque Terre

0

ಸಂಬಂಧಿತ ಸುದ್ದಿ