ತಿಪಟೂರು:- ತಾಲ್ಲೂಕಿನ ಹುಚ್ಚನಟ್ಟಿ ಅಂಡರ್ ಪಾಸ್ ಬಳಿ ಹಳೇಪಾಳ್ಯ ಎಸ್ಸಿ ಕಾಲೊನಿಯ ರಂಗಸ್ವಾಮಿ (24) ಎಂಬುವರು ಜಲ್ಲಿ ತುಂಬಿದ ಕ್ರಷರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು,ಮತ್ತೋರ್ವ ಬೈಕ್ ಸವಾರನಿಗೆ ತೀವ್ರತರವಾದ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮೃತ ವ್ಯಕ್ತಿ ಹಸುವಿಗೆ ಮೇವನ್ನು ಕೊಯ್ದು ಕೊಂಡು ಹೋಗುವಾಗ ಅಂಡರ್ ಪಾಸ್ ನಲ್ಲಿ ಯಾವುದೇ ರಸ್ತೆ ನಿಬಂಧನೆಗಳು ಆಗ್ಲಿ,ರಸ್ತೆ ಹುಬ್ಬುಗಳು ಇಲ್ಲದೇ ಇರುವ ಕಾರಣ ದಿಢೀರ್ ನಂತೆ ಬಂದ ಜಲ್ಲಿ ತುಂಬಿದ ಕ್ರಷರ್ ಲಾರಿ ಬೈಕ್ ಸವಾರನ ಮೇಲೆ ಹರಿದು,ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಅಪಘಾತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ.
ತಿಪಟೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
21/07/2022 09:06 pm