ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂದಲು ಬೆಳವಣಿಗೆಗೆ ಈ ಆಹಾರ ಉತ್ತಮ

ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಹಾಗಾಗಿ ಈ ಆಹಾರ ಸೇವಿಸುವುದರಿಂದ ನೀವು ಹೆರಳವಾದ ಕೊದಲು ಪಡೆಯಬಹುದು.

ವಿಟಮಿನ್ ಎ : ಎಲ್ಲಾ ವಿಧದದ ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಇದು ಮೇದೋಗ್ರಂಥಿಗಳಿಗೆ ಚೈತನ್ಯ ನೀಡಿ, ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಆಲೂಗೆಡ್ಡೆ, ಕ್ಯಾರೆಟ್ ಮತ್ತು ಪಾಲಾಕ್ ಸೊಪ್ಪುಗಳಲ್ಲಿ ಇದು ಹೇರಳವಾಗಿ ಲಭಿಸುತ್ತದೆ.

ವಿಟಮಿನ್ ಬಿ : ಕೂದಲಿನ ಬೆಳವಣಿಗೆಗೆ ಇದು ಅತ್ಯಂತ ಉಪಯುಕ್ತವಾದ ಜೀವಸತ್ವ. ಧಾನ್ಯಗಳು, ಮಾಂಸಾಹಾರ, ಸೀ ಫೂಡ್ಸ್ ಮತ್ತು ಹಸಿರು ಸೊಪ್ಪುಗಳಲ್ಲಿ ಇದು ಹೆಚ್ಚಿರುತ್ತವೆ.

ವಿಟಮಿನ್ ಸಿ : ಕೂದಲಿನ ರಚನೆಗೆ ಪ್ರಮುಖ ಭಾಗವಾಗಿರುವ ಕಾಲಜನ್ ಗೆ ವಿಟಮಿನ್ ಸಿ ಅತ್ಯಗತ್ಯ. ಇದು ಸ್ಟ್ರಾಬೆರಿ, ಮೆಣಸು, ಸೀಬೆಹಣ್ಣು ಮತ್ತು ಸಿಟ್ರಸ್ ಫ್ರೂಟ್ಸ್ ಗಳಲ್ಲಿ ಹೇರಳವಾಗಿ ಸಿಗುತ್ತದೆ.

ವಿಟಮಿನ್ ಡಿ : ವಿಟಮಿನ್ ಕೊರತೆಯು ಕೂದಲಿನ ಕೊರತೆಗೆ ಕಾರಣವಾಗಿರುತ್ತದೆ. ಸೂರ್ಯನ ಕಿರಣಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಮೀನು, ಕಾಡ್ ಲಿವರ್ ಆಯಿಲ್, ಅಣಬೆಗಳು ವಿಟಮಿನ್ ಡಿ ಇರುವ ಆಹಾರಗಳಾಗಿವೆ.

ವಿಟಮಿನ್ ಇ : ಆರೋಗ್ಯಪೂರ್ಣ ಕೂದಲಿನ ಬೆಳವಣಿಗೆಗೆ ವಿಟಮಿನ್ ಇ ಅತ್ಯವಶ್ಯಕ. ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಾಲಾಕ್ ಮತ್ತು ಅವಕಾಡೊಗಳಲ್ಲಿ ಹೆಚ್ಚಾಗಿರುತ್ತದೆ.

Edited By : Nirmala Aralikatti
PublicNext

PublicNext

02/09/2022 03:19 pm

Cinque Terre

15.03 K

Cinque Terre

0