ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ಮನೆ ಮದ್ದಿನಿಂದ ಐಬ್ರೋವನ್ನು ಮತ್ತಷ್ಟು ಆಕರ್ಷಕವಾಗಿ ಮಾಡಬಹುದು.
ಆಲೋವೇರಾ : ಆಲೋವೇರಾ ಜೆಲ್ ಹುಬ್ಬನ್ನು ಮತ್ತಷ್ಟು ದಟ್ಟವಾಗಿ ಮಾಡುವ ಶಕ್ತಿ ಹೊಂದಿದೆ. ಕಪ್ಪಗೆ ಹಾಗೂ ದಟ್ಟಗೆ ಐಬ್ರೋ ಬೇಕೆನ್ನುವವರು ಮೊದಲು ಆಲೋವೇರಾ ಎಲೆಯನ್ನು ತೆಗೆದುಕೊಳ್ಳಿ. ಅದರಲ್ಲಿರುವ ಜೆಲ್ ತೆಗೆದು, ಐಬ್ರೋಗೆ ಹಚ್ಚಿಕೊಳ್ಳಿ. ಸುಮಾರು 15-20 ನಿಮಿಷಗಳ ಕಾಲ ಹಾಗೆ ಬಿಡಿ. ನಂತ್ರ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ದಿನ ಹೀಗೆ ಮಾಡಿ.
ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ಚರ್ಮಕ್ಕೆ ಬಹಳ ಅನುಕೂಲ. ತಲೆ ಕೂದಲಿಗೊಂದೆ ಅಲ್ಲ ಐಬ್ರೋಕ್ಕೆ ಕೂಡ ತೆಂಗಿನ ಎಣ್ಣೆ ಬೆಸ್ಟ್. ರಾತ್ರಿ ತೆಂಗಿನ ಎಣ್ಣೆಯನ್ನು ಹುಬ್ಬಿಗೆ ಹಚ್ಚಿ ಮಲಗುವುದು ಒಳ್ಳೆಯದು.
ಈರುಳ್ಳಿ ರಸ : ಸುಂದರ ಹಾಗೂ ದಟ್ಟ ಐಬ್ರೋ ಆಸೆಯುಳ್ಳವರು ಈರುಳ್ಳಿ ರಸ ಬಳಸಬಹುದು. ಈರುಳ್ಳಿ ರಸವನ್ನು ಹುಬ್ಬಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ತೊಳೆಯಿರಿ. ತೊಳೆಯಲು ಗುಲಾಬಿ ರಸವನ್ನು ನೀವು ಬಳಸಬಹುದು.
ಹಾಲು : ತೆಳ್ಳಗಿನ ಹುಬ್ಬು ನಿಮ್ಮದಾಗಿದ್ದರೆ ನೀವು ಹಾಲನ್ನು ಬಳಸಬಹುದು. ಹಾಲನ್ನು ಮೊದಲು ಬಿಸಿ ಮಾಡಿ. ನಂತ್ರ ಅದು ತಣ್ಣಗಾಗಲು ಬಿಡಿ. ಆಮೇಲೆ ಹುಬ್ಬಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ಮುಖ ತೊಳೆಯಿರಿ.
PublicNext
13/06/2022 03:21 pm