ದೇಹದ ತೂಕ ಇಳಿಸಿಕೊಳ್ಳುವ ಪ್ರತಿಯೊಬ್ಬರು ಮೊದಲು ಮಾಡುವ ಕೆಲಸ ಏನ್ ಗೊತ್ತೆ? ಹೌದು.! ಅವರು ತಮ್ಮ ದೈನಂದಿನ ಡಯೆಟ್ ಪ್ಲಾನ್ ನಲ್ಲಿ ಅನ್ನ ಸೇವಿಸೋದನ್ನ ಪಕ್ಕಕ್ಕೆ ಇಟ್ಟು ಬಿಡುತ್ತಾರೆ. ಆದರೆ ಇಲ್ಲೊಂದಷ್ಟು ವಿಶೇಷ ಇರೋ ಅನ್ನ ಇದೆ. ಅದುವೇ ರೆಡ್ ರೈಸ್ ಮತ್ತು ಬ್ರೌನ್ ರೈಸ್. ಇವುಗಳ ಉಪಯೋಗ ಏನೂ ಅಂತ ತಿಳಿಯೋಣ ಬನ್ನಿ.
ಬ್ರೌನ್ ರೈಸ್ ವೈಟ್ ರೈಸ್ ಗಿಂತಲೂ ಅತ್ಯುತ್ತಮವಾಗಿಯೇ ಇದೆ. ಇದನ್ನ ಬಳಸುವುದರಿಂದ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ. ವೈಟ್ ರೈಸ್ ಉಪಯೋಗಿಸುವದರಿಂದ ಆಗುವ ನಷ್ಟಗಳು ಇದರಿಂದ ಆಗೋದೇ ಇಲ್ಲ. ಇದು ತುಂಬಾ,ತುಂಬಾ ಹೆಲ್ದಿಯಾಗಿಯೇ ಇರುತ್ತದೆ.
ಬ್ರೌನ್ ರೈಸ್ ಮತ್ತು ರೆಡ್ ರೈಸ್ ಎರಡೂ ಶಕ್ತಿಯುತ್ವಾಗಿಯೇ ಇವೆ. ಚಯಾಪಚಯ (metabolism)ವನ್ನ ಹೆಚ್ಚಿಸುವಲ್ಲಿ ಭಾರಿ ಪರಿಣಾಮಕಾರಿ ಕೆಲಸವನ್ನೇ ಮಾಡುತ್ತವೆ. ಒಂದೇ ಮಾತಿನಲ್ಲಿ ಸರಳವಾಗಿ ಹೇಳುವುದಾದರೆ, ವೈಟ್ ರೈಸ್ ನಿಂದ ಹೆಚ್ಚಿನ ಗ್ಯಾಸ್ ಪ್ರಾಬ್ಲಂ ಆಗಬಹುದು. ಹೊಟ್ಟೆ ಕೂಡ ಬರಬಹುದು. ಆದರೆ ಬ್ರೌನ್ ಮತ್ತು ರೆಡ್ ರೈಸ್ ಉಪಯೋಗಿಸುವದರಿಂದ ಈ ತೊಂದರೆ ಇರೋದಿಲ್ಲ ಅಂತಲೇ ಹೇಳಬಹುದು.
ಕೊನೆ ಮಾತು: ದೇಹದ ತೂಕ ಇಳಿಸಿಕೊಳ್ಳುವವರು ರೆಡ್ ರೈಸ್ ಮತ್ತು ಬ್ರೌನ್ ರೈಸ್ ಗೇನೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಅವರ ಡಯೆಟ್ ಪ್ಲಾನ್ ಅಲ್ಲಿ ಈ ರೈಸ್ ಇದ್ದೇ ಇರುತ್ತವೆ.
PublicNext
14/03/2022 01:21 pm