ಬೇಕಾಗುವ ಸಾಮಗ್ರಿಗಳು:
* ಮಟನ್- 1 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್-
* ಮೆಣಸಿನ ಹುಡಿ-1 ಚಮಚ
* ಹಸಿಮೆಣಸಿನ ಕಾಯಿ-2
* ದನಿಯಾ- 2 ಚಮಚ
* ಅರಿಶಿನ ಹುಡಿ-1 ಚಮಚ
* ಈರುಳ್ಳಿ -1
* ತೆಂಗಿನೆಣ್ಣೆ- ಅರ್ಧ ಕಪ್
* ಕರಿಬೇವು ಸೊಪ್ಪು-ಸ್ವಲ್ಪ
* ತೆಂಗಿನಕಾಯಿ-ಸ್ವಲ್ಪ
* ಸೋಂಪು ಕಾಳು ಹುಡಿ-1 ಚಮಚ
* ಗರಂ ಮಸಾಲ-1 ಚಮಚ
* ಕಾಳುಮೆಣಸು- ಸ್ವಲ್ಪ
ಮಾಡುವ ವಿಧಾನ:
* ಕುಕ್ಕರ್ ಗೆ 1 ಕೆಜಿ ಮಟನ್ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸಿನ ಹುಡಿ, ಅರಿಸಿನ ನೀರು ಹಾಕಿ ಬೇಯಿಸಿಕೊಳ್ಳಬೇಕು.
* ನಂತರ ಒಂದು ಬಾಣಲೆಗೆ ತೆಂಗಿನೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕರಿಬೇವು, ತೆಂಗಿನಕಾಯಿ ಹಾಕಿ ಕಂದು ಬಣ್ಣ ಆಗುವರೆಗೂ ಹುರಿಯಿರಿ.
* ಈಗ ಹಸಿಮೆಣಸಿನ ಕಾಯಿ, ಈರುಳ್ಳಿ, ಅರಿಸಿಣ, ಖಾರದ ಪೌಡರ್, ದನಿಯಾ ಪೌಡರ್, ಸೋಂಪುಕಾಳು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ನಂತರ ಅದಕ್ಕೆ ಬೇಯಿಸಿದ ಮಟನ್, ಗರಂ ಮಸಾಲೆ, ಕಾಳುಮೆಣಸಿನ ಹುಡಿ ಸೇರಿಸಿ ಮಟನ್ ಕಂದು ಬಣ್ಣ ಆಗುವರೆಗೂ ಕೈಯಾಡಿಸುತ್ತಾ, ಚೆನ್ನಾಗಿ ರೋಸ್ಟ್ ಮಾಡಿದರೆ ರುಚಿಯಾದ ಮಟನ್ ಸವಿಯಲು ಸಿದ್ಧ.
PublicNext
26/02/2022 03:17 pm