ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿಗಾಲದಲ್ಲಿ ತ್ವಚೆ ಸಮಸ್ಯೆಗೆ ಪುದೀನಾ ಫೇಸ್ ಪ್ಯಾಕ್

ಪುದೀನಾ ಎಲೆಗಳು ಅಡುಗೆಗೆ ಮಾತ್ರವಲ್ಲ, ಫೇಸ್ ಪ್ಯಾಕ್ ಆಗಿಯೂ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.ಚಳಿಗಾಲದಲ್ಲಿ ತ್ವಚೆ ಡ್ರೈ ಆಗಿ ಮುಖದಲ್ಲೆಲ್ಲಾ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ನಿವಾರಣೆಗೆ ಪುದೀನಾ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು.

ಹತ್ತು ಸ್ವಚ್ಛವಾದ ಪುದೀನಾ ಎಲೆಗಳನ್ನು ಕೊಯ್ದು ತೊಳೆದು ಒಂದು ಲೋಟ ನೀರು ಕುದಿಯಲು ಇಟ್ಟು, ಅದಕ್ಕೆ ಹಾಕಿ. ಹತ್ತು ನಿಮಿಷ ಕುದಿಸಿ ಬಳಿಕ ದಪ್ಪನೆಯ ಟವಲ್ ಅನ್ನು ಇದಕ್ಕೆ ಮುಳುಗಿಸಿ ಮುಖಕ್ಕೆ ಒತ್ತಿ. ಎರಡರಿಂದ ಮೂರು ನಿಮಿಷದ ಬಳಿಕ ಮತ್ತೆ ನೀರಿಗೆ ಅದ್ದಿ, ಇದನ್ನೇ ಪುನರಾವರ್ತಿಸಿ. ಐದರಿಂದ ಆರು ಬಾರಿ ಹೀಗೆ ಮಾಡುವುದರಿಂದ ತ್ವಚೆ ಮೃದುವಾಗುತ್ತದೆ. ದಿನಕ್ಕೆ ಎರಡು ಬಾರಿ ಹೀಗೆ ಮುಖಕ್ಕೆ ಪುದೀನಾ ನೀರನ್ನು ಲೇಪಿಸಿಕೊಳ್ಳಬಹುದು.

ಪುದೀನಾ ಎಲೆ, ಗುಲಾಬಿ ದಳ ಅಥವಾ ನೀರು, ಒಂದು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಳಿಕ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಮಾಡಿ ನೋಡಿ. ಒಣತ್ವಚೆ ಸಮಸ್ಯೆ ದೂರವಾಗುತ್ತದೆ.

Edited By : Nirmala Aralikatti
PublicNext

PublicNext

19/01/2022 10:10 am

Cinque Terre

17.11 K

Cinque Terre

0