ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈರುಳ್ಳಿ ಪನೀರ್ ತುಂಬಿಸಿ ಮಾಡುವ ಮೃದುವಾದ ರುಚಿಯಾದ ಪರಾಠಾ

ಪರಾಠಾಗಳಲ್ಲಿ ತುಂಬಾ ವಿಧಗಳಿವೆ. ಹೊಸ ಹೊಸ ಸಾಮಗ್ರಿಗಳನ್ನು ಉಪಯೋಗಿಸಿ, ಬೇಕಾದ ರೀತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ವಿವಿಧ ಬಗೆಯ ಪರಾಠಾಗಳನ್ನು ಪ್ರಯತ್ನಿಸಬಹುದು. ನಾವು ಕೂಡ ಇವತ್ತು ಒಂದು ಹೊಸ ಬಗೆಯ ಪರಾಠಾವನ್ನು ಮಾಡಿ ನೋಡೋಣ. ಈರುಳ್ಳಿ ಮತ್ತು ಪನೀರ್ ಉಪಯೋಗಿಸಿ ರುಚಿಕರವಾದ ಒಂದು ಪರಾಠಾವನ್ನು ತಯಾರಿಸೋಣ. ಇದು ಎಲ್ಲ ಪರಾಠಾಗಳಿಗಿಂತಲೂ ವಿಭಿನ್ನವಾಗಿರುತ್ತದೆ. ಇದನ್ನು ತಯಾರಿಸುವ ವಿಧಾನವೂ ತುಂಬಾ ಸರಳ. ಗೋದಿ ಹಿಟ್ಟಿಗೆ ಓಂಕಾಳು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಒಳಗಡೆ ಈರುಳ್ಳಿ ಮತ್ತು ಪನೀರಿನಿಂದ ಮಾಡಿದ ಮಸಾಲೆ ಮಿಶ್ರಣವನ್ನು ತುಂಬಿ ಬದಿಗಳನ್ನು ಮಡಚಿ, ಸಮವಾಗಿ ಲಟ್ಟಿಸಿ, ಕಾವಲಿಯ ಮೇಲೆ ಬೇಯಿಸಿದರೆ ರುಚಿಯಾದ ಪರಾಠಾ ಸಿದ್ಧವಾಗುತ್ತದೆ. ಬನ್ನಿ ಹಾಗಾದರೆ ಈರುಳ್ಳಿ ಪನೀರ್ ಪರಾಠಾ ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

12/01/2022 03:50 pm

Cinque Terre

36.07 K

Cinque Terre

0

ಸಂಬಂಧಿತ ಸುದ್ದಿ