ಹೊಟೇಲಿಗೆ ಊಟಕ್ಕೆ ಹೋದಾಗ ಬಹಳಷ್ಟು ಜನರು ಇಷ್ಟಪಟ್ಟು ತಿನ್ನುವುದು ಗೀರೈಸ್. ಇದು ಎಲ್ಲಾ ಗ್ರೇವಿಯ ಜೊತೆ ತುಂಬಾ ಚೆನ್ನಾಗಿರುತ್ತದೆ. ನಾವು ಮನೆಯಲ್ಲಿಯೂ ಅದೇ ರೀತಿಯ ತುಪ್ಪದ ಅನ್ನ ಮಾಡಿಕೊಳ್ಳಬಹುದು. ಇದು ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿ ಊಟಕ್ಕೆ ತುಂಬಾ ಚೆನ್ನಾಗಿರುತ್ತದೆ. ಬಾಸುಮತಿ ಅಕ್ಕಿಯನ್ನು ತುಪ್ಪದಲ್ಲಿ ಇತರ ಮಸಾಲೆಗಳೊಂದಿಗೆ ಹುರಿದು ಮಾಡುವುದರಿಂದ, ತುಂಬಾ ಒಳ್ಳೆಯ ಪರಿಮಳದ ಜೊತೆ ರುಚಿಯಾಗಿಯೂ ಇರುತ್ತದೆ. ಇದಕ್ಕೆ ಬೆಳ್ಳುಳ್ಳಿ ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಹಾಕುವುದರಿಂದ ತುಂಬಾ ಅದ್ಭುತವಾದ ಸ್ವಾದವನ್ನು ಹೊಂದಿದೆ. ಈ ತುಪ್ಪದ ಅನ್ನವನ್ನು ಕೆಲಸಕ್ಕೆ ಹೋಗುವವರ ಊಟದ ಡಬ್ಬಿಗೆ ಹಾಕಿ ಕೊಡಲು ಕೂಡ ಚೆನ್ನಾಗಿರುತ್ತದೆ.
ಈ ತುಪ್ಪದ ಅನ್ನ ದಾಲ್ ಫೈ ಜೊತೆ ಕೂಡ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮನೆಗೆ ಯಾರಾದರೂ ಬಂದಾಗ ಸರಳವಾಗಿ ಮಾಡಿಕೊಡಬಹುದು. ತುಂಬಾ ಕಡಿಮೆ ಸಾಮಾಗ್ರಿಗಳಿಂದ ಬಹು ಬೇಗ ತಯಾರಾಗುವ ಅನ್ನದ ಬಗೆ ಇದು. ಈ ಅನ್ನಕ್ಕೆ ತುಪ್ಪದಲ್ಲಿ ಹುರಿದು ಹಾಕುವ ಗೋಡಂಬಿಯು ತಿನ್ನುವಾಗ ಮಧ್ಯ ಮಧ್ಯ ಬಾಯಿಗೆ ಸಿಗುವಾಗ ಮಜವಾಗಿರುತ್ತದೆ. ಈ ರುಚಿಯಾದ ತುಪ್ಪದ ಅನ್ನವನ್ನು ನೀವು ಮನೆಯಲ್ಲಿ ಮಾಡಿ, ಸವಿಯಿರಿ. ಬನ್ನಿ ಹಾಗಾದರೆ ಹೇಗೆ ಮಾಡುವುದು ಎಂದು ನೋಡೋಣ.
PublicNext
10/01/2022 01:41 pm