ಚಿವಡಾ ಎಂಬುದು ಚಹಾ ಸಮಯಕ್ಕೆ ತಿನ್ನಬಹುದಾದ ಒಂದು ಭಾರತೀಯ ಲಘು ತಿನಿಸಾಗಿದ್ದು, ಇದನ್ನು ಸಾಮಾನ್ಯವಾಗಿ ಹುರಿದ ಅಥವಾ ಎಣ್ಣೆಯಲ್ಲಿ ಕರಿದ ಧಾನ್ಯಗಳು, ಮಸೂರ್ ಬೇಳೆ ಅಥವಾ ಒಣ ಬೀಜಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಚಿವಡಾನಲ್ಲಿನ ಪ್ರತಿಯೊಂದು ಪದಾರ್ಥಗಳು ಸಂಪೂರ್ಣವಾಗಿ ಕುರುಕುಲಾಗಿದ್ದು ಯಾರಿಗೂ ಸಹ ಇಷ್ಟವಾಗುವಂತಿರುತ್ತದೆ. ಚಿವಡಾವನ್ನು ಕಡಲೆಹಿಟ್ಟಿನಿಂದ, ಮಂಡಕ್ಕಿಯಿಂದ ಅಥವಾ ಅವಲಕ್ಕಿಯಿಂದ ಮಾಡಲಾಗುತ್ತದೆ. ಇವತ್ತು ನಾವು ಅವಲಕ್ಕಿಯಿಂದ ಗರಿ ಗರಿಯಾದ ಚಿವಡಾ ಮಾಡುವ ವಿಧಾನವನ್ನು ತಿಳಿಯೋಣ. ಈ ಚಿವಡಾ ಮಾಡಿ ಗಾಳಿಯಾಡದ ಡಬ್ಬಕ್ಕೆ ತುಂಬಿಟ್ಟರೆ, ತಿಂಗಳವರೆಗೆ ಇಟ್ಟು ತಿನ್ನಬಹುದು.
PublicNext
08/01/2022 03:40 pm