ಮದುವೆ ಫಿಕ್ಸ್ ಆದ ಹುಡುಗಿಯರಿಗೆ ತಾವೂ ಚೆನ್ನಾಗಿ ಕಾಣಬೇಕು ಎಂಬ ಆಸೆ ಇರುತ್ತೆ. ಅವರು ಈ ಟಿಪ್ಸ್ ಫಾಲೋ ಮಾಡಿ
ಓಟ್ಸ್-1/2 ಕಪ್, ಮಸೂರ್ ದಾಲ್ -1/2 ಕಪ್ ಕಪ್, ಅಕ್ಕಿ-1/4 ಕಪ್, 9 ಬಾದಾಮಿ, ಇವಿಷ್ಟನ್ನು ಬೇರೆ ಬೇರೆಯಾಗಿ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಸ್ವಲ್ಪ ಪುಡಿಗೆ ಒಂದು ಚಿಟಿಕೆ ಅರಿಶಿನ ಹಾಕಿ ಮಿಶ್ರಣ ಮಾಡಿ. ಆಮೇಲೆ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮೈಗೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕೈಯಲ್ಲಿ ನೀರು ತೆಗೆದುಕೊಂಡು ನಿಧಾನಕ್ಕೆ ನಿಮ್ಮ ದೇಹವನ್ನು ಮಸಾಜ್ ಮಾಡಿಕೊಳ್ಳಿ. ಆಮೇಲೆ ಮೈ ತೊಳೆದುಕೊಳ್ಳಿರಿ. ಇದರಿಂದ ಡೆಡ್ ಸ್ಕಿನ್ ದೂರವಾಗುತ್ತದೆ ತ್ವಚೆ ಹೊಳೆಯುತ್ತದೆ.
2 ಚಮಚ ಹಾಲಿನ ಪುಡಿ, 2 ಚಮಚ ಕಡಲೆಹಿಟ್ಟು, 2 ಚಮಚ ಬಾದಾಮಿ ಪುಡಿ ಇವಿಷ್ಟನ್ನು ಮೊದಲು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಟಿಕೆ ಅರಿಶಿನ ಸೇರಿಸಿ. ಆಮೇಲೆ 1 ಟೇಬಲ್ ಸ್ಪೂನ್ ಹಾಲಿನ ಕೆನೆ, ಅರ್ಧ ಲಿಂಬೆ ಹಣ್ಣಿನ ರಸ, 4 ಹನಿ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ತ್ವಚೆಯ ಒರಟುತನ ದೂರವಾಗಿ ಮೃದುವಾಗುತ್ತದೆ.
PublicNext
25/12/2021 03:09 pm