ಧಾರವಾಡ ಪೇಢಾ ಅಥವಾ ಮೈಸೂರು ಪಾಕಿನಂತೆ ಊರಿನ ಹೆಸರನ್ನು ಜೊತೆಯಲ್ಲೇ ಕೊಂಡೊಯ್ಯುವ ಕೆಲವೇ ಕೆಲವು ತಿನಿಸುಗಳಲ್ಲಿ ಬೆಳಗಾವಿ ಕುಂದವೂ ಒಂದು. ಹಾಲನ್ನು ಕುದಿಸಿ ಬತ್ತಿಸಿ ಮಾಡುವ ಈ ಸಿಹಿಯನ್ನು ಹೆಚ್ಚಾಗಿ ದೀಪಾವಳಿ ಹಾಗೂ ಇನ್ನಿತರ ಹಬ್ಬದ ಸಮಯದಲ್ಲಿ ಮಾಡಿಯೇ ಮಾಡುತ್ತಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿಯೂ ಪ್ರಸಿದ್ಧವಾಗಿರುವ ಈ ಬೆಳಗಾವಿ ಕುಂದ ಒಮ್ಮೆ ನೀವೆಲ್ಲರೂ ಮಾಡಿ ನೋಡಿ ‘ಸವಿ’ಯಲೇಬೇಕಾದ ಸಿಹಿ ತಿನಿಸು. ಈ ಸಿಹಿಯನ್ನು ಬೇರೆ ರಾಜ್ಯಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ ಹಾಲ್ಕೋವಾ, ಕಲಾಕಂದ್ ಹಾಗೂ ಇನ್ನಿತರ ಹೆಸರುಗಳಿಂದ ಕರೆಯುತ್ತಾರೆ. ಅಂಗಡಿ ಅಥವಾ ಬೇಕರಿಯಿಂದ ತಂದು ತಿನ್ನುವ ಬದಲು ನಾವೇ ಮನೆಯಲ್ಲಿಯೇ ಶುಚಿ ರುಚಿಯಾಗಿ, ಯಾವುದೇ ಪ್ರಿಸರ್ವೇಟಿವ್(ಸಂರಕ್ಷಕ) ಬಳಸದೇ ಮಾಡಿದಾಗ ಸಿಗುವ ಖುಷಿಯೇ ಬೇರೆ. ಅಲ್ಲದೆ ಹಾಲಿನಿಂದ ಸಮೃದ್ಧವಾಗಿರುವ ಈ ತಿನಿಸನ್ನು ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ. ಸರಿಯಾದ ಕ್ರಮದಲ್ಲಿ ಮಾಡಿದಾಗ ಈ ಕುಂದ ಸಿಹಿಯನ್ನು ವಾರದವರೆಗೆ ಗಾಳಿಯಾಡದ ಜಾರಿನಲ್ಲಿ ಶೇಖರ ಮಾಡಿ ಇಡಬಹುದು.
PublicNext
15/12/2021 10:27 pm