ಬೆಳಗಿನ ಉಪಹಾರಕ್ಕೆ ಎಷ್ಟು ಅಡುಗೆಗಳಿದ್ದರೂ ಕಡಿಮೆಯೇ. ಒಂದೇ ತರಹದ ತಿಂಡಿಗಳನ್ನು ಮೇಲಿಂದ ಮೇಲೆ ತಿನ್ನಲಾಗುವುದಿಲ್ಲ. ಎಲ್ಲರೂ ವೈವಿಧ್ಯತೆಯನ್ನು ಬಯಸುತ್ತಾರೆ. ಅಂತಹ ವಿಭಿನ್ನವಾದ ಒಂದು ಉಪಹಾರ ಎಂದರೆ ಅದುವೇ ಆಲೂಗಡ್ಡೆ ಆಮ್ಲೆಟ್. ಸಾಮಾನ್ಯವಾಗಿ ಮಾಡುವ ಆಮ್ಲೆಟ್‌ಗಿಂತಲೂ ಇದು ತುಂಬಾ ರುಚಿಯಾಗಿರುತ್ತದೆ. ಇದರಲ್ಲಿ ಮೊಟ್ಟೆಯ ಜೊತೆ ಆಲೂಗಡ್ಡೆ ಹಾಗೂ ಈರುಳ್ಳಿ ಮಿಶ್ರಣ ಬೇರೆ ರೀತಿಯ ರುಚಿ ಕೊಡುತ್ತದೆ.
ಇದು ಒಳಗೆಲ್ಲಾ ಮೃದುವಾಗಿ, ಹೊರಗಡೆ ಗರಿ ಗರಿಯಾಗಿ ತುಂಬಾ ರುಚಿಯಾಗಿರುತ್ತದೆ. ಒಂದು ಆಮ್ಲೆಟ್ ತಿನ್ನುವುದರಲ್ಲಿಯೇ ಹೊಟ್ಟೆ ತುಂಬುತ್ತದೆ. ಇದನ್ನು ಮಾಡುವ ವಿಧಾನವೂ ತುಂಬಾ ಸುಲಭ. ತುಂಬಾ ಕಡಿಮೆ ಸಾಮಾಗ್ರಿಗಳಿಂದ ಬೇಗ ತಯಾರಿಸಬಹುದಾದಂತಹ ಉಪಹಾರವಿದು. ನೀವೂ ಮನೆಯಲ್ಲಿ ಒಮ್ಮೆ ಮಾಡಿ ನೋಡಿ, ಎಲ್ಲರೂ ಇಷ್ಟಪಡುತ್ತಾರೆ. ಬನ್ನಿ ಹಾಗಾದರೆ ಮಾಡುವ ವಿಧಾನವನ್ನು ತಿಳಿಯೋಣ.
PublicNext
11/12/2021 07:36 pm