ಮಸಾಲೆ ದೋಸೆಯನ್ನು ಇಷ್ಟ ಪಡದವರೇ ಇಲ್ಲ. ನಾನಂತೂ ತಿಂಡಿ ತಿನ್ನಲು ಹೋಟೆಲಿಗೆ ಹೋದಾಗ ಯಾವಾಗಲೂ ಹೇಳುವುದೇ ಮಸಾಲೆ ದೋಸೆ. ಗರಿ ಗರಿಯಾದ ದೋಸೆಗೆ ಕೆಂಪು ಚಟ್ನಿ ಸವರಿ ಒಳಗಡೆ ಆಲೂ ಬಾಜಿ ಹಾಕಿರುತ್ತಾರೆ. ವ್ಹಾ! ಈಗಲೇ ಬಾಯಲ್ಲಿ ನೀರುರುತ್ತದೆ. ದೋಸೆಗೆ ಸರಿ ಸಮವಾಗಿ ನಿಲ್ಲುವ ಇನ್ನೊಂದು ಉಪಹಾರವಿಲ್ಲ. ದೋಸೆಗೆ ದೋಸೆಯೇ ಸಾಟಿ. ದೋಸೆಗಳಲ್ಲಿ ಹಲವಾರು ವಿಧಗಳಿವೆ. ಆದರೆ ಮಸಾಲಾ ದೋಸೆ ಎಲ್ಲರಿಗೂ ಇಷ್ವವಾದ ದೋಸೆ.
ಆದರೆ ನಾವು ಮನೆಯಲ್ಲಿ ಮಾಡಿದಾಗ ದೋಸೆಯು ಹೊಟೇಲಿನ ರುಚಿ ಬರುವುದಿಲ್ಲ. ಇಂದು ನಾವು ಹೋಟೆಲಿನಲ್ಲಿ ತಯಾರಿಸುವ ಹಾಗೆ ಮಸಾಲಾ ದೋಸೆ ಮಾಡುವುದನ್ನು ನೋಡೋಣ. ನಾವು ತೋರಿಸಿದ ಹಾಗೆ ನೀವು ಒಮ್ಮೆ ಮಾಡಿ ನೋಡಿ. ತುಂಬಾ ಚೆನ್ನಾಗಿ ಆಗುತ್ತದೆ. ಎಲ್ಲರೂ ಇಷ್ಟಪಟ್ಟು ಪದೇ ಪದೇ ಮಾಡಲು ಹೇಳುತ್ತಾರೆ ಅಷ್ಟೊಂದು ರುಚಿಯಾಗಿರುತ್ತದೆ. ಇನ್ನೇಕೆ ತಡ ಬೇಗ ಮಾಡುವ ವಿಧಾನವನ್ನು ತೀಳಿಯೋಣ.
PublicNext
10/12/2021 10:07 am