ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರ್ ಈರುಳ್ಳಿ ಸಾರು ಮಾಡುವ ವಿಧಾನ

ರಸಂ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಸಾಮಾನ್ಯವಾಗಿ ರಸಂ ಮಾಡಲು ಕೇವಲ ಟೊಮೆಟೊ ಅಥವಾ ಹುಣಸೆ ಹಣ್ಣು ಹಾಕುತ್ತಾರೆ. ಇಂದು ನಾವು ಈರುಳ್ಳಿ ಹಾಗು ಟೊಮೆಟೊ ಎರಡನ್ನು ಉಪಯೋಗಿಸಿ ರಸಂ ಮಾಡುವುದನ್ನು ನೋಡೋಣ. ಬೇಳೆ ಸಾರು ಹಾಗು ತರಕಾರಿ ಸಾಂಬಾರುಗಳು ಬೇಜಾರಾದಾಗ ಈ ರಸಂ ಮಾಡಿಕೊಳ್ಳಬಹುದು. ತುಂಬಾ ಕಡಿಮೆ ಸಾಮಾಗ್ರಿಗಳಿಂದ ಬೇಗ ತಯಾರಾಗುವ ಅಡುಗೆ ಇದು. ಬಿಸಿ ಅನ್ನದ ಜೊತೆ ತುಂಬಾ ರುಚಿಯಾಗಿರುತ್ತದೆ.

ನಮ್ಮ ಮನೆಯಲ್ಲಿ ಇದನ್ನು ಹಾಗೆ ಕುಡಿಯಲು ಇಷ್ಟಪಡುತ್ತಾರೆ. ಹುಳಿ, ಸಿಹಿ, ಖಾರ ಎಲ್ಲವೂ ಸೇರುವುದರಿಂದ ಹದವಾದ ಸ್ವಾದ ಇರುತ್ತದೆ. ರಸಂ ಪುಡಿ ಹಾಕುವುದರಿಂದ ಅದರ ಪರಿಮಳವೂ ಅಷ್ಟೇ ಆಕರ್ಷಕವಾಗಿರುತ್ತದೆ. ಮನೆಗೆ ಊಟಕ್ಕೆ ದಿಢೀರನೆ ಯಾರಾದರು ಬಂದಾಗ ಬೇಗ ಮಾಡಿಕೊಳ್ಳಬಹುದು. ಇದನ್ನು ಮಾಡುವ ವಿಧಾನವೂ ತುಂಬಾ ಸರಳ. ಬನ್ನಿ ಹಾಗಾದರೆ ಹೇಗೆ ಮಾಡುವುದು ಎಂದು ತಿಳಿಯೋಣ.

Edited By : Vijay Kumar
PublicNext

PublicNext

08/12/2021 05:18 pm

Cinque Terre

33.52 K

Cinque Terre

0