ಮನೆಯಲ್ಲಿ ನಾವು ಯಾವ ರೀತಿ ಉಪ್ಪಿಟ್ಟಿನ ಪ್ರಿಮಿಕ್ಸ್, ರವೆ ಇಡ್ಲಿಯ ಪ್ರಿಮಿಕ್ಸ್ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಕೇಸರಿ ಬಾತಿನ ಪ್ರಿಮಿಕ್ಸ್ ಕೂಡ ಮಾಡಿಟ್ಟುಕೊಳ್ಳಬಹುದು. ಇದನ್ನು ಒಮ್ಮೆ ಮಾಡಿ, ಗಾಳಿಯಾಡದ ಡಬ್ಬಕ್ಕೆ ಹಾಕಿ ಶೇಖರಿಸಿ ಇಟ್ಟುಕೊಂಡರೆ, ಬೇಕೆನಿಸಿದಾಗ ಬೇಗ ಕೇಸರಿಬಾತ್ ಮಾಡಬಹುದು. ಇದರಲ್ಲಿಯೇ ಏಲಕ್ಕಿ ಮತ್ತು ಕೇಸರಿ ಹಾಕುವುದರಿಂದ ಮಾಡುವಾಗ ಇನ್ನೂ ಸುಲಭವಾಗುತ್ತದೆ. ಇದು ಕೆಲಸಕ್ಕೆ ಹೋಗುವವರಿಗೆ ತುಂಬಾ ಸಹಾಯವಾಗುತ್ತದೆ.
ಕಡಿಮೆ ಸಾಮಗ್ರಿಗಳಿಂದ ತಯಾರಾಗುವ ರುಚಿಯಾದ ಸಿಹಿ ತಿನಿಸು ಎಂದರೆ ಕೇಸರಿಬಾತ್. ಕೇಸರಿಬಾತ್ ಎಲ್ಲರಿಗೂ ಇಷ್ಟವಾಗುವ ಸಿಹಿ ತಿನಿಸು. ಜಾಸ್ತಿ ತುಪ್ಪ ಹಾಕಿ ಮಾಡಿದರೆ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ತಿನ್ನುವಾಗ ಮಧ್ಯದಲ್ಲಿ ಬಾಯಿಗೆ ಸಿಗುವ ಗೋಡಂಬಿ ಒಣ ದ್ರಾಕ್ಷಿಯು ತುಂಬಾ ಮಜವಾಗಿರುತ್ತದೆ. ನೀವು ಈ ರೀತಿ ಪ್ರಿಮಿಕ್ಸ್ ಮಾಡಿಟ್ಟುಕೊಳ್ಳಿ ತುಂಬಾ ಸಹಾಯವಾಗುತ್ತದೆ. ಹೇಗೆ ಮಾಡುವುದು ಅಂತೀರಾ? ಬನ್ನಿ ನೋಡೋಣ.
PublicNext
04/12/2021 08:24 pm