ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಗಿ ಸೂಪ್ ಮಾಡುವುದು ತುಂಬಾ ಸುಲಭ

ಬೇಕಾಗುವ ಸಾಮಾಗ್ರಿಗಳು : ರಾಗಿ ಹಿಟ್ಟು-3 ಚಮಚ, ಬೀನ್ಸ್-3 ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಕ್ಯಾರೆಟ್-1, ಈರುಳ್ಳಿ-1 ಮಧ್ಯಮ ಗಾತ್ರದ್ದು, ಬಟಾಣಿ-3 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ-1/2 ಟೀ ಸ್ಪೂನ್, ನೀರು-ಅಗತ್ಯವಿರುವಷ್ಟು, ಎಣ್ಣೆ, 1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್.

ರಾಗಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಜೀರಿಗೆ ಹಾಕಿ. ನಂತರ ಈರುಳ್ಳಿ ಹಾಕಿ ಅದು ಕೆಂಪಾಗುತ್ತಲೆ ಕತ್ತರಿಸಿಟ್ಟುಕೊಂಡ ತರಕಾರಿ ಹಾಕಿ.

ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ ಉಪ್ಪು ಹಾಕಿ ಬೇಯಿಸಿ. ತರಕಾರಿ ಬೆಂದ ಕೂಡಲೇ ರಾಗಿ ಹಿಟ್ಟು ಸೇರಿಸಿ ಕೈ ಬಿಡದೆ ತಿರುಗಿಸುತ್ತಾ ಇರಿ. ನಂತರ ಅದಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ಇರುವಾಗಲೇ ಸೇವಿಸಿ.

Edited By : Nirmala Aralikatti
PublicNext

PublicNext

03/12/2021 07:30 pm

Cinque Terre

25.39 K

Cinque Terre

0