ಕೆಲವೊಂದು ಸಿಹಿ ತಿನಿಸನ್ನು ಅಡುಗೆಯಲ್ಲಿ ತುಂಬಾ ಪರಿಣಿತಿ ಹೊಂದಿರುವವರು ಮಾತ್ರ ಮಾಡಬೇಕೆನ್ನುವ ಒಂದು ತಪ್ಪು ಕಲ್ಪನೆ ಈಗಷ್ಟೇ ಹೊಸತಾಗಿ ಅಡುಗೆ ಕಲಿಯುತ್ತಿರುವವರಿಗೆ ಅನ್ನಿಸುವುದು ಸಹಜ. ಮೊದ ಮೊದಲು ಅಡುಗೆ ಮಾಡುವಾಗ ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳೊಂದಿಗೆ, ಹರಿಕಾರರೂ ಸಹ ಈ ಕೆಲವು ಸಿಹಿಯನ್ನು ಧೈರ್ಯದಿಂದ ಪ್ರಯತ್ನಿಸಬಹುದು. ಆ ತರಹದ ಅಡುಗೆ ವಿಧಾನಗಳಲ್ಲಿ ಒಂದು ತೆಂಗಿನ ತುರಿ ಲಾಡು. ಏಕೆಂದರೆ ಈ ಲಾಡು ಮಾಡಲು ಯಾವುದೇ ಸ್ಥಿರತೆ ಪರಿಶೀಲನೆ ಅಗತ್ಯವಿಲ್ಲ. ತ್ವರಿತ ತಯಾರಿಯಲ್ಲಿ ಮಾಡಿ ಮುಗಿಸಬಹುದಾದ ಲಾಡಿನ ವಿಧಾನವಿದು.ಇವತ್ತು ನಾವು ತೆಂಗಿನ ತುರಿ ಲಾಡು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ. ನೀವೂ ಒಮ್ಮೆ ಈ ಲಾಡು ಮಾಡಿ, ತಿಂದು, ಆನಂದಿಸಿ.
PublicNext
01/12/2021 10:07 pm