ದಹಿ ಭಲ್ಲಾ ಒಂದು ಮೃದುವಾದ ಮತ್ತು ಸ್ವಾದಿಷ್ಟವಾದ ತಿನಿಸು. ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಸಾಯಂಕಾಲದ ಸಮಯದಲ್ಲಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಒಳಗಡೆ ಉದ್ದಿನ ವಡೆಯ ರುಚಿ, ಅದರ ಮೇಲೆ ಮೊಸರು ಹಾಗೂ ಪುದಿನ, ಖರ್ಜೂರದ ಚಟ್ನಿ, ವಾಹ್! ನೋಡಲೂ ಅಷ್ಟೇ ಸೊಗಸಾಗಿರುತ್ತದೆ. ಇನ್ನು ತಿನ್ನಲು ಕೇಳಬೇಕೆ? ಇದನ್ನು ಹೊರಗಡೆ ಹೋಟೆಲಿನಲ್ಲಿ ಜಾಸ್ತಿ ದುಡ್ಡುಕೊಟ್ಟು ಸ್ವಲ್ಪವೇ ತಿನ್ನ ಬೇಕಾಗುತ್ತದೆ. ಆದರೆ ಮನೆಯಲ್ಲಿ ಮಾಡಿಕೊಂಡರೆ, ಕಡಿಮೆ ಖರ್ಚಿನಲ್ಲಿ ಮನೆಮಂದಿಯೆಲ್ಲಾ ತಿಂದು ಸಂಭ್ರಮಿಸಬಹುದು.
PublicNext
26/11/2021 01:59 pm