ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಹಕ್ಕೆ ತಂಪು ನೀಡುವ ಮೆಂತೆ ಗಂಜಿ ಮಾಡುವ ವಿಧಾನ

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಹುಡುಕುತ್ತಿರುತ್ತೇವೆ. ಮೊಸರು, ಮಜ್ಜಿಗೆ, ರಾಗಿ ಗಂಜಿ ತಂಪಾದ ಪಾನೀಯಗಳು ಇತ್ಯಾದಿ. ಇವುಗಳೆಲ್ಲ ಬೇಸರವಾದಾಗ, ನಾವು ಇಂತಹುದೇ ದೇಹಕ್ಕೆ ತಂಪು ನೀಡುವ ಮೆಂತೆ ಗಂಜಿಯನ್ನು ತಯಾರಿಸಿ ಸೇವಿಸಬಹುದು. ಇದನ್ನು ಬೆಳಗಿನ ಉಪಹಾರಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೂ ಸೇವಿಸಬಹುದು. ಮೆಂತೆ ಗಂಜಿಯನ್ನು ಮಾಡುವುದು ತುಂಬಾ ಸುಲಭ ಮತ್ತು ಬಹು ಬೇಗನೇ ತಯಾರಿಸಿಕೊಳ್ಳಬಹುದು. ಇದರಲ್ಲಿ ತೆಂಗಿನತುರಿ ಅಥವಾ ತೆಂಗಿನ ಹಾಲು, ಬೆಲ್ಲ ಬಳಸುವುದರಿಂದ ರುಚಿಯೂ ಚೆನ್ನಾಗಿರುತ್ತದೆ. ಏಲಕ್ಕಿಯ ಪರಿಮಳ ತಿನ್ನುವಾಗ ಹಾಯಾಗಿರುತ್ತದೆ.

ಮೆಂತೆ ಗಂಜಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮೆಂತೆ ಕೂದಲಿನ ಸಮಸ್ಯೆಗೆ , ದೃಷ್ಠಿ ಚುರುಕಾಗಲು, ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು. ವಯಸ್ಸಾದವರಿಗೆ ಹಾಗು ಚಿಕ್ಕಮಕ್ಕಳಿಗೆ ಉತ್ತಮವಾದ ಆಹಾರ ಇದು. ಬಹಳ ಸುಲಭವಾಗಿ ಜೀರ್ಣವಾಗುತ್ತದೆ. ಇಷ್ಟು ಸುಲಭವಾದ ಹಾಗೂ ಆರೋಗ್ಯಕರವಾದ ಮೆಂತೆ ಗಂಜಿಯನ್ನು ನಾವು ವಾರಕೊಮ್ಮೆಯಾದರೂ ಏಕೆ ಮಾಡಿಕೊಳ್ಳಬಾರದು? ಬನ್ನಿ ಹಾಗಾದರೆ ಆರೋಗ್ಯಕರವಾದ ಮೆಂತೆ ಗಂಜಿ ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

24/11/2021 03:01 pm

Cinque Terre

29.37 K

Cinque Terre

0