ಅನ್ನದ ರುಚಿ ಹೆಚ್ಚಿಸುವ, ಒಳ್ಳೆಯ ಘಮ ಬೀರುವ ರಸಂ ಎಂದರೆ ಓಮದ ರಸಂ. ಬಾಣಂತಿಯರಿಗೆ ಹೇಳಿ ಮಾಡಿಸಿದ ರಸಂ. ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾದ ರಸಂ. ದಿನವೂ ಒಂದೇ ರೀತಿಯ ಸಾರು ಮಾಡುವುದಕ್ಕಿಂತ ಈ ಓಮದ ರಸಂ ಮಾಡಿಕೊಳ್ಳಬಹುದು. ಸಾಮಾನ್ಯವಾದ ರಸಂಗಿಂತಲೂ ಇದು ವಿಭಿನ್ನವಾದ ರುಚಿಯನ್ನು ಹೊಂದಿದೆ. ಈ ರಸಂ ಮಾಡಲು ಓಂ ಕಾಳು ಹಾಗು ಜೀರಿಗೆಯನ್ನು ಪುಡಿಮಾಡಿ ಒಗ್ಗರಣೆಯಲ್ಲಿ ಹಾಕಿ ಹುರಿಯುತ್ತೇವೆ. ಆದ್ದರಿಂದ ಇದರಿಂದ ಬರುವ ಘಮವು ಆಕರ್ಷಕವಾಗಿರುತ್ತದೆ. ಬಿಸಿ ಅನ್ನದ ಮೇಲೆ ತುಪ್ಪ ಹಾಕಿಕೊಂಡು ಈ ರಸಂ ಜೊತೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ. ಬನ್ನಿ ಹಾಗಾದರೆ ಮಾಡುವ ವಿಧಾನವನ್ನು ನೋಡೋಣ.
PublicNext
22/11/2021 09:17 am