ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಸ್ಟೆಡ್ ಆಲ್ಮನ್ಡ್ (ಹುರಿದ ಬಾದಾಮಿನ) ಐಸ್ ಕ್ರೀಮ್ ಮಾಡುವ ವಿಧಾನ

ಬೇಸಿಗೆ ಶುರುವಾಯಿತೆಂದರೆ ಐಸ್ ಕ್ರೀಮ್ ನೆನಪಾಗುತ್ತದೆ. ಬಿಸಿಲಿನ ಬೇಗೆ ನೀಗಿಸಲು ಐಸ್ ಕ್ರೀಮ್ ಎಲ್ಲರೂ ಇಷ್ಟಪಡುತ್ತಾರೆ. ಊಟದ ನಂತರ ಐಸ್ ಕ್ರೀಮ್ ಸೇವಿಸಿದರೆ ಹೊಟ್ಟೆಯಲ್ಲಿ ತಂಪಾದ ಅನುಭವವಾಗುತ್ತದೆ. ಹೊರಗಡೆಯ ಐಸ್ ಕ್ರೀಮ್ ಬೆಲೆ ಜಾಸ್ತಿ ಇರುತ್ತದೆ. ಆದರೆ ನಾವು ಮನೆಯಲ್ಲಿಯೇ ಐಸ್ ಕ್ರೀಮ್ ಮಾಡಿಕೊಂಡರೆ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದು.

ಈ ಐಸ್ ಕ್ರೀಮ್ ಮಾಡಲು ನಾವು ಹಾಲು ಹಾಗೂ ಬಾದಾಮು ಉಪಯೋಗಿಸುತ್ತಿದ್ದೇವೆ. ಹಾಗಾಗಿ ಇದು ಆರೋಗ್ಯಕರವಾಗಿ ಇರುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಬಾದಾಮಿನಲ್ಲಿರುವ ಪೌಷ್ಟಿಕಾಂಶವು ದೇಹಕ್ಕೆ ದೊರೆಯುತ್ತದೆ. ಮನೆಯಲ್ಲಿಯೇ ಮಾಡುವುದರಿಂದ ಮಕ್ಕಳೂ ಕೂಡ ಎಷ್ಟು ಬೇಕಾದಷ್ಟು ತಿನ್ನಬಹುದು. ಇದನ್ನು ಮಾಡುವ ವಿಧಾನವೂ ತುಂಬಾ ಸರಳ. ಅತೀ ಕಡಿಮೆ ಸಾಮಾಗ್ರಿಗಳನ್ನು ಬಳಸಿ ಮಾಡಿಕೊಳ್ಳಬಹುದು. ಬನ್ನಿ ಹಾಗಾದರೆ ನೀವೂ ಮನೆಯಲ್ಲಿ ಐಸ್ ಕ್ರೀಮ್ ಮಾಡಿ ಕೊಡಲು ಅದನ್ನು ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

18/11/2021 05:44 pm

Cinque Terre

32.39 K

Cinque Terre

0