ಚಳಿಗಾಲ ಬಂತೆಂದರೆ ತ್ವಚೆಯ ಬಗ್ಗೆ ಕೊಂಚ ಜಾಗರೂಕರಾಗಿ ಇರಬೇಕಾಗುತ್ತದೆ. ಆದ್ದರಿಂದ ಈ ಚಳಿಗಾಲದಲ್ಲಿ ನಿಮ್ಮ ಚರ್ಮದ ರಕ್ಷಣೆಗಾಗಿ ಬಾದಾಮಿ ಫೇಸ್ ಪ್ಯಾಕ್ ಗಳು ಹಾಕಿಕೊಳ್ಳಿ ಅದಕ್ಕಾಗಿ ಹೀಗೆ ಮಾಡಿ.
ಫೇಸ್ ಪ್ಯಾಕ್ ತಯಾರಿಸಲು ಬೇಕಾಗಿರುವ ಪದಾರ್ಥಗಳು
• 1 ಚಮಚ ಬಾದಾಮಿ ಪುಡಿ
• 2 ಚಮಚ ಹಸಿ ಹಾಲು
ಫೇಸ್ ಪ್ಯಾಕ್ ತಯಾರು ಮಾಡುವುದು ಮತ್ತು ಮುಖದ ಮೇಲೆ ಹಚ್ಚುವುದು ಹೇಗೆ?
• ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಬಾದಾಮಿ ಪುಡಿ ಮತ್ತು ಹಾಲು, ಎರಡೂ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ
ಮಾಡಿ. ಅದು ಗಟ್ಟಿ ಪೇಸ್ಟ್ ಆಗುವ ತನಕ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
• ಈಗ, ನಿಮ್ಮ ಮುಖವನ್ನು ಶುದ್ಧವಾದ ನೀರಿನಿಂದ ತೊಳೆಯಿರಿ ಮತ್ತು ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ
ಹಚ್ಚಿ.
• ನಂತರ ಈ ಫೇಸ್ ಪ್ಯಾಕ್ ಅನ್ನು ಸುಮಾರು 20 ನಿಮಿಷಗಳ ಕಾಲ ಹಾಗೇ ಇರಿಸಿ. ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನ ಮೂಲಕ ಚೆನ್ನಾಗಿ ತೊಳೆಯಿರಿ. ನಿಮ್ಮ ಮುಖ ಮತ್ತು ಕೈ ಗಳಿಗೆ ಸಹ ಈ ಮಿಶ್ರಣವನ್ನು ನೀವು ಹಚ್ಚಬಹುದು.
PublicNext
17/11/2021 07:17 pm