ನಾವು ತಿನ್ನುವ ಆಹಾರದಲ್ಲಿಯೇ ಔಷಧೀಯ ಗುಣಗಳಿವೆ. ಎಷ್ಟೋ ಸಣ್ಣ ಪುಟ್ಟ ಕಾಯಿಲೆಗಳು ನಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳಿಂದ ಗುಣವಾಗುತ್ತವೆ. ಉದಾಹರಣೆಗೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಮೆಣಸು ಇವುಗಳೆಲ್ಲಾ ಅನೇಕ ಕಾಯಿಲೆಗಳಿಗೆ ರಾಮ ಬಾಣ. ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ. ಶುಂಠಿಯನ್ನು ಕ್ಯಾಂಡಿಯ ರೂಪದಲ್ಲಿ ತಯಾರಿಸಿಕೊಂಡರೆ, ಆರಾಮಾಗಿ ಸೇವಿಸಬಹುದು. ಯಾವಾಗಲೂ ಮನೆಯಲ್ಲಿಯೇ ದೊರೆಯುವಂತಹ ಸಾಮಾಗ್ರಿಗಳಿಂದ ಆ ಕ್ಯಾಂಡಿಯನ್ನು ಮಾಡಿಕೊಳ್ಳಬಹುದು.
PublicNext
16/11/2021 01:49 pm