ಸಕ್ಕರೆ ಪೊಂಗಲ್ ಥಟ್ಟಂತ ರೆಡಿಯಾಗುತ್ತೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್, ಹೆಸರುಬೇಳೆ – 1/4 ಕಪ್, ಬೆಲ್ಲದ ಪುಡಿ – 2 ಕಪ್, ಏಲಕ್ಕಿ ಪುಡಿ – 1/2 ಟೀ ಸ್ಪೂನ್, ದ್ರಾಕ್ಷಿ – 2 ಟೇಬಲ್ ಸ್ಪೂನ್, ಬಾದಾಮಿ – ಸ್ವಲ್ಪ, ತುಪ್ಪ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಒಂದು ಬಾಣಲೆಗೆ ಹೆಸರು ಬೇಳೆ ಹಾಕಿ ಪರಿಮಳ ಬರುವವರಗೆ ಹುರಿದುಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಹುರಿದುಕೊಂಡ ಹೆಸರುಬೇಳೆ, ತೊಳೆದ ಅಕ್ಕಿ, 3 ½ ಕಪ್ ನೀರು ಸೇರಿಸಿ 6 ವಿಷಲ್ ಕೂಗಿಸಿಕೊಳ್ಳಿ. ನಂತರ ಪ್ಯಾನ್ ಗೆ ಬೆಲ್ಲ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಬೆಲ್ಲ ಕುದಿಸಿಕೊಳ್ಳಿ.
ನಂತರ ಕುಕ್ಕರ್ ನಲ್ಲಿ ಬೆಂದ ಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೆಲ್ಲದ ನೀರು ಸೇರಿಸಿ ತುಪ್ಪ ಹಾಕಿ ಗ್ಯಾಸ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ. ಬೆಲ್ಲ ಹಾಗೂ ಅಕ್ಕಿ, ಬೇಳೆ ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೇಯಿಸಿಕೊಳ್ಳಿ. ನಂತರ ಏಲಕ್ಕಿ ಪುಡಿ ಸೇರಿಸಿ, ತುಪ್ಪದಲ್ಲಿ ಹುರಿದ ಬಾದಾಮಿ, ದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ.
PublicNext
12/11/2021 01:32 pm