ಇಂದಿನ ಆಧುನಿಕ ಕಾಲದಲ್ಲಿ, ಭಾರತದ ಎಲ್ಲಾ ಹಳ್ಳಿ, ಪಟ್ಟಣದ ಮನೆ ಮನೆಗಳಲ್ಲಿ ಹಾಗೂ ಬೀದಿ ಬದಿಗಳಲ್ಲಿ ವಿದೇಶಿ ತಿನಿಸುಗಳು ಲಗ್ಗೆ ಇಟ್ಟಿವೆ. ಎಲ್ಲರ ಅಭಿರುಚಿಗಳು ಬದಲಾಗುತ್ತಿವೆ. ಬದಲಾದ ಪದ್ಧತಿಗೆ ತಕ್ಕಂತೆ ನಾವೂ ಕೂಡ ಬದಲಾಗಬೇಕಿದೆ. ಹಳೆಯ ತಿಂಡಿ ತಿನಿಸುಗಳನ್ನು ಮಾಡುತ್ತಾ ಕುಳಿತರೆ, ಮಕ್ಕಳು ನಮ್ಮ ಅಡುಗೆಯನ್ನು ಇಷ್ಟಪಡುವುದಿಲ್ಲ. ಮನೆಯವರ ಹಾಗೂ ಮಕ್ಕಳ ಮನಸ್ಸನ್ನು ಗೆಲ್ಲ ಬೇಕಾದರೆ, ಅವರ ಅಭಿರುಚಿಗೆ ತಕ್ಕಂತಹ ಅಡುಗೆಯನ್ನು ಮಾಡಿಕೊಡಬೇಕು. ಅಂತಹ ಆಧುನಿಕ ತಿನಿಸುಗಳಲ್ಲಿ ಚಿಲ್ಲಿ ಗೋಬಿ ಕೂಡ ಒಂದು. ಸಂಜೆಯಾಯಿತೆಂದರೆ ಸಾಕು ರಸ್ತೆ ಬದಿಯ ಗಾಡಿಗಳಲ್ಲಿ ಜನ ಜಂಗುಳಿಯೇ ಸೇರಿರುತ್ತದೆ. ಏನಪ್ಪಾ ಇಷ್ಡು ಜನ ಸೇರಿದ್ದಾರೆ ಎಂದು ನೋಡಿದರೆ ಅವರೆಲ್ಲಾ ನೂಡಲ್ಸ್, ಗೋಬಿ ಮಂಚೂರಿ ತಿನ್ನಲು ಸೇರಿದ್ದಾರೆ ಎಂದು ತಿಳಿದಾಗ ಆಶ್ಚರ್ಯವಾಗುತ್ತದೆ.
ಅಲ್ಲಿ ಸ್ವಚ್ಛತೆಯೂ ಇರುವುದಿಲ್ಲ, ಹಾಗು ಕಡಿಮೆ ಕ್ವಾಲಿಟಿಯ ಎಣ್ಣೆ, ಇತರ ಪದಾರ್ಥಗಳನ್ನು ಬಳಸಿರುತ್ತಾರೆ. ಇವುಗಳನ್ನೆಲ್ಲ ನಮ್ಮ ಮನೆಯವರು, ಮಕ್ಕಳು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಲು ನಾವೇ ಮನೆಯಲ್ಲಿ ಮಾಡಿಕೊಂಡರೆ ಸ್ವಚ್ಛವಾಗಿ ಹಾಗೂ ಆರೋಗ್ಯಕರವಾಗಿ ಇರುತ್ತದೆ. ಮತ್ತು ಕಡಿಮೆ ಖರ್ಚಿನಲ್ಲಿ ತಯಾರಿಸಿ ಎಲ್ಲರನ್ನು ಸಂತೃಪ್ತಿಗೊಳಿಸಬಹುದು. ಚಿಲ್ಲಿ ಗೋಬಿ ಹೆಸರೇ ತಿಳಿಸುವಂತೆ ಸ್ವಲ್ಪ ಖಾರವಾಗಿ ಇರುತ್ತದೆ. ಹಾಗೂ ಅಷ್ಟೇ ರುಚಿಯಾಗಿರುತ್ತದೆ. ಬನ್ನಿ ಹಾಗಾದರೆ ಮನೆಯಲ್ಲಿಯೇ ಹೇಗೆ ಸುಲಭವಾಗಿ ಚಿಲ್ಲಿ ಗೋಬಿ ಮಾಡುವುದು ಎಂದು ನೋಡೋಣ.
PublicNext
09/11/2021 06:26 pm