ಚುರಮುರಿ 10 ನಿಮಿಷದಲ್ಲಿ ಮಾಡಬಹುದಾದಂತಹ ತಿನಿಸು. ಸಂಜೆಯ ಚಹಾ ಸಮಯಕ್ಕೆ ತಿನ್ನಲು ತುಂಬಾ ಮಜವಾಗಿರುತ್ತದೆ. ಮನೆಗೆ ಯಾರಾದರು ನೆಂಟರು ಬಂದಾಗ ಥಟ್ ಅಂತ ಚಹಾ ಜೊತೆಗೆ ಮಾಡಿ ಕೊಡಬಹುದು. ಚುರಮುರಿ ಎಂದರೆ ಯಾರೂ ಬೇಡ ಎನ್ನುವುದಿಲ್ಲ. ಎಲ್ಲರೂ ಇಷ್ಟಪಟ್ಟು ತಿನ್ನುವ ಏಕೈಕ ತಿನಿಸು ಎಂದರೆ ಚುರಮುರಿ. ಚುರಮುರಿಯನ್ನು ಉಪಯೋಗಿಸಿ ಹಲವಾರು ಬಗೆಯ ತಿನಿಸುಗಳನ್ನು ಮಾಡಬಹುದು. ಅದರಲ್ಲಿಯೇ ಒಂದು ಬಗೆಯ ಚುರಮುರಿಯನ್ನು ಮಾಡುವ ವಿಧಾನವನ್ನು ಇಂದು ನೋಡೋಣ.
PublicNext
08/11/2021 07:32 pm