ಸಾಮಾನ್ಯವಾಗಿ ನಾವು ಮೆಣಸಿನಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ ಈರುಳ್ಳಿ ಬಜ್ಜಿ ಹಾಗೂ ಇನ್ನಿತರ ಬಜ್ಜಿಗಳನ್ನು ಸವಿದಿರುತ್ತೇವೆ. ಆದರೆ ತುಂಬಿದ ಬಾಳೆಕಾಯಿ ಬಜ್ಜಿ ಹೆಸರನ್ನು ಕೇಳಿರುವುದು ಕಡಿಮೆ. ಇದು ಒಂದು ತುಂಬಾ ಸ್ವಾದಿಷ್ಟವಾದ ತಿನಿಸು. ಸಾಯಂಕಾಲದ ಚಹಾ ಸಮಯದಲ್ಲಿ ಉಪಯೋಗಿಸುವ ಸ್ನ್ಯಾಕ್ಸಗಳಲ್ಲಿ ಈ ತುಂಬಿದ ಬಾಳೆಕಾಯಿ ಬಜ್ಜಿಯೂ ಒಂದು. ಇದು ನಾವು ಸಾಮಾನ್ಯವಾಗಿ ತಿನ್ನುವ ಬಾಳೆಕಾಯಿ ಬಜ್ಜಿಗಿಂತಲೂ ಇದರ ರುಚಿ ತುಂಬಾ ವಿಭಿನ್ನವಾಗಿರುತ್ತದೆ. ಇದರಲ್ಲಿ ನಾವು ಕರಿದ ಶೇಂಗಾ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಾಕಿದ ಮಿಶ್ರಣವನ್ನು ತುಂಬುತ್ತೇವೆ.
PublicNext
05/11/2021 07:52 pm