ಪ್ರತಿದಿನ ಉಪಹಾರಕ್ಕೆ ದೋಸೆ, ಇಡ್ಲಿ, ಉಪ್ಪಿಟ್ಟು ಇವೆಲ್ಲವೂ ಬೇಡ ಎನಿಸಿದಾಗ ವಿಭಿನ್ನವಾಗಿನಾವು ಸಲಾಡ್ ಮಾಡಬಹುದು. ಎಲ್ಲಾ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಂಡರೆ, ಥಟ್ ಅಂತ ಬೇಗ ಮಾಡಿಕೊಳ್ಳಬಹುದು. ಇದರಲ್ಲಿ ನಾವು ದಾಳಿಂಬೆ, ಕಿತ್ತಳೆ, ಎಲೆ ಕೋಸು, ಮುಳ್ಳು ಸೌತೇಕಾಯಿ, ತುರಿದ ಗಜ್ಜರಿ, ನೆನೆಸಿದ ಬಾದಾಮಿ, ನೆನೆಸಿದ ಶೇಂಗಾ ಹಾಕುವುದರಿಂದ ಹಣ್ಣಿನ ಹಾಗೂ ತರಕಾರಿಗಳ ಪೋಷಕಂಶಗಳು ದೊರೆಯುತ್ತವೆ. ಇದಷ್ಟೇ ಅಲ್ಲದೆ ನಿಮಗಿಷ್ಟವಾದ ಹಣ್ಣು ಹಾಗೂ ತರಕಾರಿಗಳನ್ನು ಸೇರಿಸಿ ಮಾಡಿಕೊಳ್ಳಬಹುದು. ಇದಕ್ಕೆ ನಾವು ಚಾಟ್ ಮಸಾಲಾ, ನಿಂಬೆ ರಸ ಹಾಗೂ ಮೆಣಸಿನ ಪುಡಿ ಹಾಕುವುದರಿಂದ ಇನ್ನು ರುಚಿಯಾಗಿರುತ್ತದೆ. ಬನ್ನಿ ಹಾಗಾದರೆ ಈ ಸಲಾಡ್ ಮಾಡುವುದನ್ನು ಕಲಿಯೋಣ.
PublicNext
03/11/2021 06:35 pm