ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುಷ್ಕ ಚರ್ಮ ನಿವಾರಣೆಗೆ ಇಲ್ಲಿದೆ ಟಿಪ್ಸ್

ಶುಷ್ಕ ಹವಾಮಾನದಿಂದಾಗಿ ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಚಳಿಗಾಲದಲ್ಲಿ ತಣ್ಣನೆಯ ನೀರಿನ ಸ್ನಾನವನ್ನು ಎಲ್ಲರು ಅವೈಡ್ ಮಾಡುತ್ತಾರೆ. ಬಿಸಿ ನೀರು ಬಯಸ್ತಾರೆ. ಆದ್ರೆ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಬಿಸಿ ನೀರು ಚರ್ಮದ ಎಣ್ಣೆ ಅಂಶವನ್ನು ತೆಗೆದು ಹಾಕುತ್ತದೆ. ಆಗ ಚರ್ಮ ಮತ್ತಷ್ಟು ಒಣಗಿದಂತೆ ಕಾಣುತ್ತದೆ.

ಒಣ ಚರ್ಮದವರು ಸಾಬೂನುಗಳನ್ನು ಬಳಸಬೇಡಿ. ಮುಖವನ್ನು ಸ್ವಚ್ಛಗೊಳಿಸಲು ಹಾಲಿನ ಕೆನೆ ಬಳಸಿ. ನಂತ್ರ ಆಲ್ಕೋಹಾಲ್ ಮುಕ್ತ ಟೋನರ್ ಅಥವಾ ಮಾಯಿಶ್ಚರೈಸರ್ ಬಳಸಿ. ದೇಹಕ್ಕೆ ಉತ್ತಮ ಬಾಡಿ ಲೋಷನ್ ಅಥವಾ ಬಾಡಿ ಬಟರ್ ಬಳಸಿ.

ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗಂತ ನೀರು ಕುಡಿಯುವುದನ್ನು ನಿಲ್ಲಿಸಬೇಡಿ. ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಿರಿ. ಜ್ಯೂಸ್ ಸೇವಿಸಿ. ನೀರಿನಂಶವಿರುವ ಹಣ್ಣುಗಳನ್ನು ಸೇವಿಸಿ. ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ವಾರಕ್ಕೆ ಎರಡು ಬಾರಿ ಫೇಸ್ ಸ್ಕ್ರಬ್ ಬಳಸಿ. ಚರ್ಮವು ಆರೋಗ್ಯಕರವಾಗಿರಲು ಇದು ಬಹಳ ಮುಖ್ಯ.

Edited By : Nirmala Aralikatti
PublicNext

PublicNext

28/10/2021 12:49 pm

Cinque Terre

17.19 K

Cinque Terre

0