ಪೆಸರಟ್ಟು ದೋಸೆಯನ್ನು ಹೆಸರು ಕಾಳು/ಬೇಳೆಯ ದೋಸೆ ಎಂದು ಸಹ ಕರೆಯಲಾಗುತ್ತದೆ. ತೆಲಗು ಭಾಷೆಯಲ್ಲಿ ಪೆಸರಟ್ಟು ಎಂದು ಕರೆಯಲಾಗುವುದು. ಈ ಪಾಕವಿಧಾನಕ್ಕೆ ಹೆಸರು ಬೇಳೆಯನ್ನು ನೆನೆಸಿಕೊಂಡು, ರುಬ್ಬಿಕೊಳ್ಳಬೇಕು. ನಂತರ ದೋಸೆಯನ್ನು ತಯಾರಿಸಲಾಗುವುದು. ಆರೋಗ್ಯಕರ ಗುಣವನ್ನು ಒಳಗೊಂಡಿರುವ ಈ ದೋಸೆಯು ವಿಶೇಷ ರುಚಿಯನ್ನು ನೀಡುವುದು. ಗರಿಗರಿಯಾಗಿ ಬರುವ ಈ ದೋಸೆಯು ಎಲ್ಲಾ ವಯೋಮಾನದವರು ಸಹ ಸವಿಯಲು ಬಯಸುವರು. ಇದನ್ನು ಮುಂಜಾನೆಯ ತಿಂಡಿ ಅಥವಾ ಸಾಯಂಕಾಲದ ತಿಂಡಿಯನ್ನಾಗಿಯೂ ಸವಿಯಬಹುದು. ಬಹಳ ಸುಲಭವಾಗಿ ಕರಗುವ ಹೆಸರು ಬೇಳೆಯು ಜೀರ್ಣಕ್ರಿಯೆಗೆ ಅನುಕೂಲ ಮಾಡುವುದು.
PublicNext
26/10/2021 06:12 pm