ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬ್ಬದಲ್ಲಿ ಸಿಂಪಲ್ ಆಗಿ ಮಿಂಚಲು ಹೀಗೆ ರೆಡಿಯಾಗಿ

ಹಬ್ಬ ಬಂತೆಂದರೆ ಎಲ್ಲರಿಗೂ ಸುಂದರವಾಗಿ ಕಾಣಬೇಕೆಂದು ಆಸೆ ಹಾಗಾಗಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಅಲಂಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.ಹಾಗಾಗಿ ಹಬ್ಬಕ್ಕೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ.

ಯಾವುದಾದರೂ ಒಳ್ಳೆಯ ಫೇಸ್ ವಾಶ್ ಇಲ್ಲವೇ ನೀವು ಮನೆಯಲ್ಲಿಯೇ ಉಪಯೋಗಿಸುವ ಕಡಲೆ ಹಿಟ್ಟು, ಹೆಸರಿಟ್ಟನ್ನು ಬಳಸಿ ಮುಖ ತೊಳೆಯಿರಿ.

ನಂತರ ಒಂದು ಒಳ್ಳೆಯ ಗುಣಮಟ್ಟದ ಮಾಯಿಶ್ಚರೈಸರ್ ಹೆಚ್ಚಿ. ಬಳಿಕ ಒಂದೆರೆಡು ಹನಿ ಫೌಂಡೇಷನ್ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಎಲ್ಲ ಕಡೆ ತೆಳುವಾಗಿ ಹಚ್ಚಿಕೊಳ್ಳಿ. ಹಾಗೇ ನಿಮ್ಮ ಕುತ್ತಿಗೆಗೂ ಹಚ್ಚಿ. ನಂತರ ಮುಖಕ್ಕೆ ತೆಳುವಾಗಿ ಪೌಡರ್ ಸವರಿ.

ತುಟಿಯ ಭಾಗ ಕಪ್ಪಾಗಿದ್ದರೆ, ಸಕ್ಕರೆ ಹಾಗೂ ಜೇನು ತುಪ್ಪವನ್ನು ಬಳಸಿ ನಿಧಾನಕ್ಕೆ ತುಟಿಯನ್ನು ಸ್ಕ್ರಬ್ ಮಾಡಿ. ಇಲ್ಲದಿದ್ದರೆ ತೆಂಗಿನ ಎಣ್ಣೆಯಲ್ಲಿ ನಿಧಾನಕ್ಕೆ ಮಸಾಜ್ ಮಾಡಿ. ನಿಮ್ಮಿಷ್ಟದ ಲಿಪ್ ಬಾಮ್ ಹಚ್ಚಿ. ಆಮೇಲೆ ನಿಮ್ಮ ತುಟಿಗೆ ಯಾವ ಬಣ್ಣ ಸರಿ ಹೊಂದುತ್ತದೆಯೋ ಆ ಬಣ್ಣದ ಲಿಪ್ ಸ್ಟಿಕ್ ಅನ್ನು ತೆಳುವಾಗಿ ಲೇಪಿಸಿ.

ಕಣ್ಣಿನಲ್ಲಿ ಹೊಳಪಿಗಾಗಿ ಚೆನ್ನಾಗಿ ನಿದ್ರೆ ಮಾಡಿ. ಇದರಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪಾಗುವುದು ತಪ್ಪುತ್ತದೆ. ರೋಸ್ ವಾಟರ್ ನಲ್ಲಿ ಅದ್ದಿದ ಹತ್ತಿಯನ್ನು ನಿಮ್ಮ ಕಣ್ಣುಗಳ ಮೇಲೆ 10 ನಿಮಿಷವಿಟ್ಟು ಮಲಗಿ. ನಂತರ ಕಣ್ಣುಗಳನ್ನು ತೊಳೆದು ಕಾಜಲ್ ಹಚ್ಚಿ. ರೆಪ್ಪೆಗೆ ಐ ಲೈನರ್ ಹಚ್ಚಿ.

ನಿಮ್ಮ ಉಡುಪಿಗೆ ಸರಿ ಹೊಂದುವ ಬಿಂದಿ ಹಾಕಿಕೊಂಡರೆ ನೀವು ಸುಂದರವಾಗಿ ಕಾಣುತ್ತಿರಿ..

Edited By : Nirmala Aralikatti
PublicNext

PublicNext

26/10/2021 03:13 pm

Cinque Terre

13.82 K

Cinque Terre

0