ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ದರೆ ಹೇಗೆ? ಎಷ್ಟೊಂದು ಜನಕ್ಕೆ ಉಪ್ಪಿನಕಾಯಿ ಇಲ್ಲದೇ ಊಟ ಸೇರುವುದೇ ಇಲ್ಲ. ನಾವು ಮಾವಿನಕಾಯಿ, ನಿಂಬೆಹಣ್ಣು, ಸೌತೆಕಾಯಿ, ಗಜ್ಜರಿ, ಮೆಣಸಿನಕಾಯಿ, ಅಮಟೆ ಕಾಯಿ ಹೀಗೆ ಹಲವಾರು ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುತ್ತೇವೆ. ಹಿಂದಿನ ಕಾಲದಲ್ಲಿ ಮಾವಿನಕಾಯಿ ಅಥವಾ ನಿಂಬೆಕಾಯಿ ಉಪ್ಪಿನಕಾಯಿಗಳನ್ನು ಮಾಡಿ ವರ್ಷವಿಡೀ ಇಡುತ್ತಿದ್ದರು. ಆದರೆ ಈ ಉಪ್ಪಿನಕಾಯಿಗಳನ್ನು ಮಾಡಲು ಮಸಾಲೆಗಳನ್ನೆಲ್ಲಾ ತಯಾರಿಸಿಕೊಳ್ಳುವುದೇ ಒಂದು ದೊಡ್ಡ ಕೆಲಸ. ಹೀಗಾಗಿ ಈ ಮಸಾಲೆ ಪುಡಿಯನ್ನು ಮೊದಲೇ ತಯಾರಿಸಿಟ್ಟುಕೊಂಡರೆ ನಾವು ಯಾವಾಗ ಬೇಕಾದರೂ ದಿಢೀರಾಗಿ ಉಪ್ಪಿನಕಾಯಿಯನ್ನು ಮಾಡಿ ತಿನ್ನಬಹುದು.
PublicNext
17/10/2021 08:05 pm