ಮಹಾರಾಷ್ಟ್ರದ ಪ್ರಸಿದ್ಧ ತಿನಿಸುಗಳಲ್ಲಿ ಒಂದು ವಡಾ ಪಾವ್. ಸಾಮಾನ್ಯವಾಗಿ ವಡಾ ಪಾವ್ ಎಂದರೆ ಆಲೂಗಡ್ಡೆ ಹಾಕಿ ವಡೆ ತರಹ ಮಾಡಿ ಎಣ್ಣೆಯಲ್ಲಿ ಕರಿದು, ಪಾವ್ ಒಳಗಡೆ ಇಟ್ಟು ಕೊಡುತ್ತಾರೆ. ಆದರೆ ನಾವು ಇವತ್ತು ಹೇಳಲು ಹೊರಟಿರುವ ವಡಾ ಪಾವ್ ಉಲ್ಟಾ ಆಗಿದೆ. ಅಂದರೆ ಪಾವ್ ಒಳಗಡೆ ಆಲೂಗಡ್ಡೆ ವಡೆ ತರಹ ಇಟ್ಟು ನಂತರ ಅದನ್ನು ಪಾವ್ ಸಮೇತ ಎಣ್ಣೆಯಲ್ಲಿ ಕರಿಯಬೇಕು. ಇದು ತಿನ್ನಲು ವಿಭಿನ್ನವಾಗಿಯೂ ಮತ್ತೆ ಅಷ್ಟೇ ರುಚಿಕರವಾಗಿಯೂ ಇರುತ್ತದೆ. ಸಂಜೆಯ ಚಹಾ ಸಮಯಕ್ಕೆ ಹೇಳಿ ಮಾಡಿಸಿದ ಹಾಗೇ ಇರುತ್ತದೆ.
PublicNext
12/10/2021 09:16 pm