ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಸರ್ಗಿಕ ವಿಟಮಿನ್ ಸಿ ಪಾನೀಯ ಮಾಡುವ ವಿಧಾನ

ವಿಟಮಿನ್ ಸಿ ರೋಗ ಬಂದಾಗ ಬೇಗ ಚೇತರಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ರೋಗ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರು ಮೊದಲು ನೀಡುವುದೇ ವಿಟಮಿನ್ ಸಿ ಮಾತ್ರೆಗಳು. ವಿಟಮಿನ್ ಸಿ ಅಂಶವನ್ನು ಮಾತ್ರೆಯ ರೂಪದಲ್ಲಿಯೇ ಸೇವಿಸಬೇಕು ಎಂದೇನೂ ಇಲ್ಲ. ಆಹಾರದ ಮೂಲಕ ನೈಸರ್ಗಿಕವಾಗಿ ವಿಟಮಿನ್ ಸಿಯನ್ನು ನಾವು ಸೇವಿಸಬಹುದು.ವಿಟಮಿನ್ ಸಿ ಯನ್ನು ಹೇಗೆ ಪಡೆಯಬಹುದು ಎಂದು ಇಂದಿನ ಅಡುಗೆಯಲ್ಲಿ ನೋಡೋಣ. ನೈಸರ್ಗಿಕ ವಿಟಮಿನ್ ಸಿ ಪಾನೀಯವನ್ನು ತುಂಬಾ ಸುಲಭವಾಗಿ ಮಾಡಿ ಕುಡಿಯಬಹುದು.

ಈ ಪಾನೀಯದಲ್ಲಿ ಬಳಸಿರುವ ಬೆಟ್ಟದ ನೆಲ್ಲಿಕಾಯಿ ಹಲವಾರು ಸಮಸ್ಯೆಗಳಿಗೆ ರಾಮ ಬಾಣ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯಲು ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.ಇದರಲ್ಲಿ ಬಳಸುವ ಶುಂಠಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಶೀತವನ್ನು ತಡೆಗಟ್ಟುತ್ತದೆ. ಪುದಿನ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಬಾಯಿಯ ದುರ್ವಾಸೆಯನ್ನು ಹೋಗಲಾಡಿಸುತ್ತದೆ. ಬನ್ನಿ ಹಾಗಾದರೆ ತುಂಬಾ ಆರೋಗ್ಯಕವಾದ ಈ ಪಾನೀಯವನ್ನು ಮಾಡಿ ರುಚಿ ನೋಡೋಣ.

Edited By : Vijay Kumar
PublicNext

PublicNext

05/10/2021 04:05 pm

Cinque Terre

31.89 K

Cinque Terre

0