ಮೆಹಂದಿ, ಕೂದಲಿಗೆ ಬಣ್ಣ ನೀಡುತ್ತದೆ. ಬಿಳಿ ಕೂದಲಿನ ಸಮಸ್ಯೆಯಿರುವವರು ಹೆಚ್ಚಾಗಿ ಮೆಹಂದಿ ಬಳಸ್ತಾರೆ. ಜೊತೆಗೆ ತಲೆ ತಂಪಾಗಿಸಿ, ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅತಿಯಾದ್ರೆ ಎಲ್ಲವೂ ಹಾನಿಕರ. ಕೂದಲಿಗೆ ಇತಿಮಿತಿಯಲ್ಲಿ ಗೋರಂಟಿ ಹಚ್ಚಬೇಕು.
ಕೂದಲಿಗೆ ಗೋರಂಟಿ ಹಚ್ಚಿ ಅನೇಕರು ದಿನಗಟ್ಟಲೆ ಬಿಡ್ತಾರೆ. ಆದ್ರೆ ಇದು ಕೂದಲ ಆರೋಗ್ಯವನ್ನು ಹಾಳು ಮಾಡುತ್ತದೆ. ಕೂದಲಿಗೆ ಗೋರಂಟಿ ಹಚ್ಚಿ 4-5 ಗಂಟೆಗಳ ಕಾಲ ಬಿಡ್ತಿದ್ದರೆ ಇಂದೇ ಈ ಅಭ್ಯಾಸ ಬಿಡಿ. ಕೂದಲನ್ನು ಒಣಗಿಸುವುದಲ್ಲದೆ, ಕೂದಲ ಸೌಂದರ್ಯ ಹಾಳು ಮಾಡುತ್ತದೆ. ತಜ್ಞರ ಪ್ರಕಾರ, ಕೂದಲಿಗೆ ಮೆಹಂದಿ ಹಚ್ಚಿ ಒಂದುವರೆ ಗಂಟೆ ಮಾತ್ರ ಬಿಡಬಹುದು. ನಂತ್ರ ಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕು.
ಕೂದಲಿಗೆ ಗೋರಂಟಿ ಹಚ್ಚಿದ ನಂತರ ಶಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. ಕೂದಲು ಸ್ವಲ್ಪ ತೇವವಿದ್ದಾಗ ನೀವು ಎಣ್ಣೆ ಹಚ್ಚಬೇಕು. ಗೋರಂಟಿ ಕೂದಲನ್ನು ಒಣಗಿಸುತ್ತದೆ. ಹಾಗಾಗಿ ಮೆಹಂದಿ ಹಚ್ಚಿ, ಸ್ನಾನ ಮಾಡಿದ ನಂತ್ರ ಅಥವಾ ಮರುದಿನ ಕೂದಲಿಗೆ ಎಣ್ಣೆ ಹಚ್ಚಬೇಕು. ಕೂದಲಿಗೆ ಬರೀ ಮೆಹಂದಿ ಹಚ್ಚಬಾರದು. ಮೆಹಂದಿ ಜೊತೆ ಮೊಸರನ್ನು ಬಳಸಬೇಕು.
PublicNext
05/10/2021 11:30 am