ಯಾವುದೇ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಐ ಮೇಕಪ್ ತೆಗೆಯುವ ಸುಲಭ ವಿಧಾನ ಇಲ್ಲಿದೆ ನೋಡಿ. ಜೋರಾಗಿ ಉಜ್ಜಬೇಡಿ. ಇದರಿಂದ ಕಣ್ಣಿಗೆ ತೊಂದರೆಯಾಗುತ್ತದೆ. ಒಂದು ಹತ್ತಿಯ ಉಂಡೆ ತೆಗೆದುಕೊಂಡು ಅದನ್ನು ಶುದ್ಧವಾದ ನೀರು ಅಥವಾ ಬೇಬಿ ಆಯಿಲ್ ನಲ್ಲಿ ಅದ್ದಿ ನಿಧಾನಕ್ಕೆ ಮೇಕಪ್ ತೆಗೆಯಿರಿ.
ಎಚ್ಚರಿಕೆಯಿಂದ ಮೇಕಪ್ ತೆಗೆಯಿರಿ. ಬಾದಾಮಿ ಎಣ್ಣೆ ಕೂಡ ಮೇಕಪ್ ತೆಗೆಯಲು ಹೆಚ್ಚು ಸಹಾಯಕಾರಿಯಾಗಿದೆ. ಇನ್ನು ಟಿಯರ್ ಫ್ರೀ ಬೇಬಿ ಶ್ಯಾಂಪೂ ಬಳಸಿ ಕೂಡ ಕಣ್ಣಿಗೆ ಹಚ್ಚಿದ ಮಸ್ಕರಾ, ಐ ಲೈನರ್ ಅನ್ನು ತೆಗೆಯಿರಿ. ಶ್ಯಾಂಪೂ ಬಳಸಲು ಆಗದಿದ್ದರೆ ಬೇಬಿ ವೈಪ್ಸ್ ಕೂಡ ಬಳಸಿ ನಿಧಾನಕ್ಕೆ ಕಣ್ಣಿನ ಮೇಕಪ್ ತೆಗೆಯಿರಿ.
ಮೇಕಪ್ ಎಲ್ಲಾ ತೆಗೆದ ಮೇಲೆ ಶುದ್ಧವಾದ ನೀರಿನಿಂದ ಮುಖ ತೊಳೆದು ಒರೆಸಿಕೊಂಡು ಬಾದಾಮಿ ಎಣ್ಣೆ ಅಥವಾ ಆಲೀವ್ ಆಯಿಲ್ ನಿಂದ ನಿಧಾನಕ್ಕೆ ಕಣ್ಣಿನ ಸುತ್ತ ಮಸಾಜ್ ಮಾಡಿಕೊಳ್ಳಿ.
PublicNext
04/10/2021 02:42 pm