ಈ ರುಚಿಕರವಾದ, ಬಾಯಲ್ಲಿ ನೀರೂರಿಸುವ ಬೆಣ್ಣೆ ದೋಸೆ ಎಲ್ಲಿಂದ ಹುಟ್ಟಿಕೊಂಡಿದೆ ಎನ್ನುವುದನ್ನು ದೋಸೆಯ ಹೆಸರೇ ಸೂಚಿಸುತ್ತದೆ. ಹೌದು. ಅಕ್ಷರಶಃ ಬೆಣ್ಣೆಯ ಪರಿಮಳದೊಂದಿಗೆ ಕೂಡಿರುವ ಈ ದೋಸೆಯನ್ನು ನಿಮ್ಮ ಮುಂದೆ ಬಡಿಸಿದರೆ ನೀವು ಆಹಾರದ ಕುರಿತು ಎಷ್ಟೇ ಕಟ್ಟು ನಿಟ್ಟಾದ ಕ್ರಮವನ್ನಿಟ್ಟುಕೊಂಡವರಾದರೂ, ಕನಿಷ್ಠ ಮೂರು ದೋಸೆಯನ್ನಾದರೂ ತಿನ್ನದೇ ಏಳುವುದಿಲ್ಲ. ದಾವಣಗೆರೆ ಬೆಣ್ಣೆಯೊಂದಿಗೆ ಬಳಸಲಾಗುವ ಚಟ್ನಿ ಮತ್ತು ಆಲೂಗಡ್ಡೆ ಪಲ್ಯ ಸ್ವಲ್ಪ ಭಿನ್ನ ರುಚಿಗಳದ್ದಾಗಿರುತ್ತವೆ. ಇವತ್ತು ನಾವು ಈ ಭಿನ್ನವಾದ ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನವನ್ನು ತಿಳಿಯೋಣ.
PublicNext
11/09/2021 05:46 pm