ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಾ ಸ್ಟ್ರಾಪ್ ನಿಂದಾದ ಕಲೆ ಅಳೆಸುವುದು ಹೇಗೆ? ಇಲ್ಲಿದೆ ಸರಳ ಉಪಾಯ

ಕೆಲವೊಮ್ಮೆ ಮಹಿಳೆಯರು ತೊಡುವ ಬಟ್ಟೆ ಅಥವಾ ಬ್ರಾನಂತಹ ಒಳಉಡುಪುಗಳಿಂದ ಬೆನ್ನು ಹಾಗೂ ಭುಜದ ಭಾಗದಲ್ಲಿ ಕೆಲವೊಂದು ಕಲೆಗಳು ಕಾಣುತ್ತವೆ. ಇದನ್ನೇ ಸಾಮಾನ್ಯವಾಗಿ ಟ್ಯಾನಿಂಗ್ ಎನ್ನುವುದು. ಇದರಿಂದ ಮರುದಿನ ಯಾವುದೇ ಸ್ಲೀವ್ ಲೆಸ್ ಬಟ್ಟೆ ಧರಿಸಲು ಮುಜುಗರ ಉಂಟಾಗುವುದು ಸುಳ್ಳಲ್ಲ. ಇಂತಹ ಟ್ಯಾನ್ ಆದ ಚರ್ಮವನ್ನು ಸರಿಪಡಿಸುವ ಕೆಲವೊಂದು ಮನೆಮದ್ದುಗಳು ಇಲ್ಲಿಒವೆ ನೋಡಿ.

ನಿಂಬೆ ಮತ್ತು ಜೇನುತುಪ್ಪ ಪ್ಯಾಕ್ : 2 ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆ ರಸವನ್ನು ಮಿಶ್ರಣ ಮಾಡಿ. ನಿಂಬೆ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಟ್ಯಾನಿಂಗ್ ವಿರುದ್ಧ ಜೇನುತುಪ್ಪ ಹೋರಾಡುತ್ತದೆ. ಈ ಪೇಸ್ಟ್ ಅನ್ನು ನಿಮ್ಮ ಎರಡೂ ಭುಜಗಳ ಮೇಲೆ ಹಚ್ಚಿ. ಕೇವಲ ಟ್ಯಾನ್ ಆದ ಜಾಗಕ್ಕೆ ಅಲ್ಲ. ಅರ್ಧ ಘಂಟೆ ನಂತರ ತೊಳೆಯಿರಿ.

ಕಾಫಿ ಸ್ಕ್ರಬ್, ಸಕ್ಕರೆ ಸ್ಕ್ರಬ್ ಅಥವಾ ಉಪ್ಪು ಸ್ಕ್ರಬ್ ನಿಂದ ಎಕ್ಸ್ ಫೋಲಿಯೇಟ್ ಮಾಡಬಹುದು. ಈ ವಿಧಾನವು ನಿಮ್ಮ ಬೆನ್ನು-ಭುಜದ ಚರ್ಮದಲ್ಲಿರುವ ಡೆಡ್ ಸೆಲ್ ಗಳನ್ನು ತೆಗೆದುಹಾಕುವುದು. ಇದಕ್ಕಾಗಿ ಸ್ವಲ್ಪ ಕಾಫಿಯನ್ನು ತೆಗೆದುಕೊಂಡು, ಭುಜದ ಮೇಲೆ ಮಸಾಜ್ ಮಾಡಿ.

ಬಾದಾಮಿ ಮತ್ತು ಕಡಲೆಹಿಟ್ಟು: 10 ಬಾದಾಮಿಯನ್ನು ನುಣ್ಣಗೆ ರುಬ್ಬಿಕೊಳ್ಳಿ ಮತ್ತು ಇದಕ್ಕೆ 2 ಚಮಚ ಕಡಲೆ ಹಿಟ್ಟು, 2 ಚಮಚ ನಿಂಬೆ ರಸ ಮತ್ತು ಸ್ವಲ್ಪ ಹಾಲನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಚರ್ಮವನ್ನು ಡಿ-ಟ್ಯಾನ್, ಸ್ಕ್ರಬ್, ಮಾಯಿಶ್ಚರೈಸ್ ಮತ್ತು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುವುದು.

ಮೊಸರು ಮತ್ತು ಅರಿಶಿನ ಪ್ಯಾಕ್: ಈ ಪ್ಯಾಕ್ ಗಾಗಿ, 4-5 ಚಮಚ ಮೊಸರು ತೆಗೆದುಕೊಂಡು ಅದಕ್ಕೆ 1 ಚಮಚ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಅನ್ನು ನಿಮ್ಮ ಭುಜದ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ಪ್ಯಾಕ್ ಆರಿದ ನಂತರ, ಅದನ್ನು ಸ್ಕ್ರಬ್ ಮಾಡಿ.

ಸನ್ ಸ್ಕ್ರೀನ್ ಹಚ್ಚಿ: ಹೌದು, ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮವಾಗಿದೆ.

Edited By : Nirmala Aralikatti
PublicNext

PublicNext

09/09/2021 12:21 pm

Cinque Terre

16.43 K

Cinque Terre

0