ಬೇಕಾಗುವ ಸಾಮಗ್ರಿಗಳು: ಟೊಮೆಟೊ – 3 (ರುಬ್ಬಿಕೊಂಡಿರುವುದು), ಹೆಚ್ಚಿದ ಈರುಳ್ಳಿ – 2, ಬೆಣ್ಣೆ – 2 ಟೇಬಲ್ ಚಮಚ, ಉಪ್ಪು (ರುಚಿಗೆ ತಕ್ಕಷ್ಟು), ಕಸೂರಿ ಮೇಥಿ – ಸ್ವಲ್ಪ, ಮೊಸರು– 2 ಟೇಬಲ್ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್– 1 ಟೇಬಲ್ ಚಮಚ, ಗರಂ ಮಸಾಲ – 1 ಚಮಚ, ಖಾರದ ಪುಡಿ – ಒಂದೂವರೆ ಚಮಚ, ಕೊತ್ತಂಬರಿ ಪುಡಿ – 1 ಚಮಚ, ಚಿಕನ್ – 1/2 ಕೆ.ಜಿ, ಕ್ರೀಮ್ – 1 ಟೇಬಲ್ ಚಮಚ
ತಯಾರಿಸುವ ವಿಧಾನ: ಮೊದಲು ಚಿಕನ್ ಗೆ ಮೊಸರು, ಉಪ್ಪು, ಖಾರದ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ, ಅರಿಸಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ನಿಂಬೆರಸ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ಎರಡು ಗಂಟೆ ನೆನೆಯಲು ಬಿಡಿ.
ಒಂದು ಪಾತ್ರೆಯಲ್ಲಿ 2 ಟೇಬಲ್ ಚಮಚದಷ್ಟು ಎಣ್ಣೆ ಹಾಕಿ, ಒಂದರ ನಂತರ ಒಂದು ಚಿಕನ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಬೆಣ್ಣೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಿ. ನಂತರ ರುಬ್ಬಿಕೊಂಡಿರುವ ಟೊಮೆಟೊ, ಗರಂ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹುರಿಯಿರಿ.
ಐದು ನಿಮಿಷಗಳ ನಂತರ ಹುರಿದುಕೊಂಡ ಚಿಕನ್ ತುಂಡು ಹಾಗೂ ಅರ್ಧ ಗ್ಲಾಸ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಿ. ಚಿಕನ್ ಬೆಂದ ನಂತರ 1 ಟೇಬಲ್ ಚಮಚ ಫ್ರೆಶ್ ಕ್ರೀಮ್ ಸೇರಿಸಿ. ಕೊನೆಯದಾಗಿ ಕಸೂರಿ ಮೇಥಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಟಿಕ್ಕಾ ಮಸಾಲೆ ರೆಡಿ.
PublicNext
31/08/2021 02:28 pm