ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿಯೇ ಮಾಡಿ ರುಚಿಯಾದ ಬಾಸುಂದಿ

ಬೇಕಾಗುವ ಸಾಮಾಗ್ರಿಗಳು:

1 ಲೀಟರ್ – ದಪ್ಪ ಹಾಲು, ಕಂಡೆನ್ಸಡ್ ಹಾಲು – 1/2 ಕಪ್, ಸಕ್ಕರೆ – 3 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1/2 ಟೀ ಸ್ಪೂನ್, ಬಾದಾಮಿ – 1/4 ಕಪ್ ಸಣ್ಣಗೆ ಹೆಚ್ಚಿದ್ದು, ಗೋಡಂಬಿ – 1/4 ಕಪ್ – ಸಣ್ಣಗೆ ಹಚ್ಚಿದ್ದು, ಪಿಸ್ತಾ – ¼ ಕಪ್, ಕೇಸರಿ – ಚಿಟಿಕೆ.

ಮಾಡುವ ವಿಧಾನ:

ಒಂದು ಪ್ಯಾನ್ ಗೆ ಹಾಲು, ಸಕ್ಕರೆ, ಕಂಡೆನ್ಸಡ್ ಮಿಲ್ಕ್ ಹಾಕಿ ಬಿಸಿ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಕಾಯಿಸಿ. ಈ ಹಾಲು ದಪ್ಪಗಾಗುವವರೆಗೆ ಚೆನ್ನಾಗಿ ಕಾಯಿಸಿ.

ನಂತರ ಗ್ಯಾಸ್ ಆಫ್ ಮಾಡಿ ಗೋಡಂಬಿ, ಬಾದಾಮಿ, ಪಿಸ್ತಾ, ಏಲಕ್ಕಿ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇನ್ನೊಂದು ಬೌಲ್ ಗೆ ಇದನ್ನು ಹಾಕಿ ಫ್ರಿಡ್ಜ್ ನಲ್ಲಿಡಿ ನಂತರ ಸರ್ವ್ ಮಾಡಿ.

Edited By : Nirmala Aralikatti
PublicNext

PublicNext

29/08/2021 02:54 pm

Cinque Terre

20.42 K

Cinque Terre

0