ಬೇಕಾಗುವ ಸಾಮಾಗ್ರಿಗಳು: ಪನ್ನೀರ್- 150 ಗ್ರಾಂ, ಹಸಿ ಬಟಾಣಿಕಾಳು- ಅರ್ಧ ಕಪ್, ಈರುಳ್ಳಿ- 2, ಬೆಳ್ಳುಳ್ಳಿ ಎಸಳು- 8, ಶುಂಠಿ- 1 ಇಂಚು, ಹಸಿಮೆಣಸಿನಕಾಯಿ- 3, ಖಾರದ ಪುಡಿ- 2 ಟೀ ಸ್ಪೂನ್, ಟೊಮ್ಯಾಟೋ- 3, ಧನಿಯಾ ಪುಡಿ- ಅರ್ಧ ಟೀ ಸ್ಪೂನ್, ಗರಂಮಸಲಾ- ಅರ್ಧ ಟೀ ಸ್ಪೂನ್, ಅರಶಿನಪುಡಿ- 1/4 ಟೀ ಸ್ಪೂನ್, ಪಲಾವ್ ಎಲೆ- 1, ಜೀರಿಗೆ- ಅರ್ಧ ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ- ಸ್ವಲ್ಪ, ಕಸೂರಿಮೇತಿ- ಸ್ವಲ್ಪ
ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಗೆ 1 ಟೀ ಸ್ಪೂನ್ ಎಣ್ಣೆ ಹಾಕಿ ಇದಕ್ಕೆ ಹೆಚ್ಚಿಟ್ಟ ಈರುಳ್ಳಿ, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು ಹಾಕಿ 5 ನಿಮಿಷ ಕಾಲ ಚೆನ್ನಾಗಿ ಬೇಯಿಸಿ.
ಬಳಿಕ ಇದು ಆರಿದ ನಂತರ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಗೆ 3 ಟೀ ಸ್ಪೂನ್ ನಷ್ಟು ಎಣ್ಣೆ ಹಾಕಿ ಪಲಾವ್ ಎಲೆ, ಜೀರಿಗೆ, ಏಲಕ್ಕಿ ಹಾಕಿ. ಇದಕ್ಕೆ ಖಾರದ ಪುಡಿ ಹಾಕಿ. ನಂತರ ರುಬ್ಬಿರುವಂತಹ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಉಪ್ಪು, ಧನಿಯಾ ಪುಡಿ, ಗರಂಮಸಾಲಾ, ಅರಶಿನಪುಡಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
ನಂತರ ಹಸಿಬಟಾಣಿ, ಪನ್ನೀರ್ ಹಾಕಿ ಮಿಕ್ಸ್ ಮಾಡಿಕೊಂಡು ನೀರು ಸೇರಿಸಿ. 5 ನಿಮಿಷ ಹಾಗೆಯೇ ಕುದಿಯಲು ಬಿಡಿ. ಕೊನೆಗೆ ಕಸೂರಿ ಮೇತಿ ಹಾಕಿದರೆ ರೋಟಿ, ಚಪಾತಿ ಜೊತೆ ಸವಿಯಲು ರುಚಿಯಾದ ಪನ್ನೀರ್ ಬಟಾಣಿ ಮಸಾಲಾ ಸಿದ್ಧ.
PublicNext
24/08/2021 02:53 pm