ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 3 ಕಪ್, ಉದ್ದಿನಬೇಳೆ – 1 ಕಪ್, ಅವಲಕ್ಕಿ- ಅರ್ಧ ಕಪ್, ಕಡಲೇಬೇಳೆ – 2 ಟೀ ಸ್ಪೂನ್, ಮೆಂತ್ಯ ಕಾಳು – 1 ಟೀ ಸ್ಪೂನ್, ಸಬ್ಬಕ್ಕಿ- 1 ಟೀ ಸ್ಪೂನ್, ಅಕ್ಕಿ ಹಿಟ್ಟು- ¼ ಕಪ್, ಚಿರೋಟಿ ರವಾ – ¼ ಕಪ್, ಮೈದಾ – 3 ಟೀ ಸ್ಪೂನ್, ಸಕ್ಕರೆ – 1 ಟೀ ಸ್ಪೂನ್.
ಮಾಡುವ ವಿಧಾನ: ಅಕ್ಕಿ, ಉದ್ದಿನಬೇಳೆ, ಕಡಲೇಬೇಳೆ, ಮೆಂತ್ಯವನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಡಿ. ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಕೂಡ ನೆನೆಸಿಡಿ. 5 ಗಂಟೆಗಳ ಬಳಿಕ ಇವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿರುವ ಹಿಟ್ಟನ್ನು 8-10 ಗಂಟೆಗಳ ಕಾಲ ಹುಳಿಬರಲು ಹಾಗೆ ಇಡಿ.
ನಂತರ ದೋಸೆ ಮಾಡುವ 1 ಗಂಟೆಗಳ ಮೊದಲು ರುಬ್ಬಿರುವ ಹಿಟ್ಟಿಗೆ ಅಕ್ಕಿಹಿಟ್ಟು, ರವಾ, ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು 1 ಗಂಟೆ ಕಾಲ ಹಾಗೆ ಇಟ್ಟು ದೋಸೆ ಮಾಡುವಾಗ ಚಿಟಿಕೆ ಸೋಡಾ ಹಾಕಿ ಕಾವಲಿಗೆ ತೆಳುವಾಗಿ ದೋಸೆ ಹುಯ್ಯಿದು ಚೆನ್ನಾಗಿ ರೋಸ್ಟ್ ಮಾಡಿದರೆ ಕ್ರಿಸ್ಪಿ ಮಸಾಲೆದೋಸೆ ರೆಡಿ.
PublicNext
09/08/2021 11:31 am